ಮುಂಬೈ: ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡಿ ನಿಷೇಧಕ್ಕೊಳಗಾಗಿದ್ದು ಮಿಕಾ ಸಿಂಗ್ ಕ್ಷಮೆ ಕೇಳಿದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ತನ್ನ ನಿರ್ಧಾರ ಹಿಂಪಡೆದಿದೆ. ಇದೀಗ ಬಾಲಿವುಡ್ ನಟಿ ಶಿಲ್ಪಾ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನನ್ನ ದೇಶ ಅಲ್ಲಿಗೆ ತೆರಳಲು ವೀಸಾ ನೀಡುತ್ತದೆ. ಆ ದೇಶದ ಜನರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧರಿದ್ದಾರೆ. ಹಾಗಾಗಿ ನಾನು ಪಾಕಿಸ್ತಾನಕ್ಕೆ ತೆರಳಿ ಕಾರ್ಯಕ್ರಮ ನೀಡುವುದು ನನ್ನ ಹಕ್ಕು. ನಾನು ಕಲಾವಿದೆಯಾಗಿದ್ದು, ನಮ್ಮ ಮೇಲೆ ಈ ರೀತಿಯ ನಿಷೇಧ ವಿಧಿಸುವುದು ಸರಿಯಲ್ಲ. ಹಣಕ್ಕಾಗಿ ಯಾವುದೇ ಮಾಧ್ಯಮದ ಅವಶ್ಯಕತೆ ನನಗಿಲ್ಲ. ರಸ್ತೆಯಲ್ಲಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನೀಡಿದ್ರೆ ನನ್ನ ಹೊಟ್ಟಿ ತುಂಬುತ್ತದೆ. ಇಂತಹ ಜನರಿಗೆ ಹೆದರಲ್ಲ ಮತ್ತು ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡೋದನ್ನ ಯಾರಪ್ಪನಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ಶಿಲ್ಪಾ ಶಿಂಧೆ ಕಿಡಿಕಾರಿದ್ದಾರೆ.
Advertisement
Advertisement
ಮಿಕಾ ಸಿಂಗ್ ಅವರಿಗೆ ಕಿರುಕುಳ ನೀಡಿ, ಬಲವಂತವಾಗಿ ಕ್ಷಮೆ ಕೇಳುವಂತೆ ಸನ್ನಿವೇಶ ಸೃಷ್ಟಿಸಲಾಯ್ತು. ನಿಷೇಧ ವಿಧಿಸುವ ಸುಮಾರು 50 ಫೌಂಡೇಶನ್ ಗಳು ಇಂದು ಹುಟ್ಟಿಕೊಂಡಿವೆ. ಇಂತಹ ಎಲ್ಲ ಫೌಂಡೇಶನ್ ಗಳು ಹಣ ತಿನ್ನಲು ಮುಂದಾಗಿವೆ. ಮಿಕಾ ಸಿಂಗ್ ಒಂದರ ನಂತರ ಒಂದು ಶೋಗಳನ್ನು ನೀಡುತ್ತಿದ್ದಾರೆ. ನಿಷೇಧ ವಿಧಿಸಿದ್ದರಿಂದ ಕಾರ್ಯಕ್ರಮ ಆಯೋಜಕರಿಗೂ ಮತ್ತು ಮಿಕಾ ಸಿಂಗ್ ದೊಡ್ಡ ನಷ್ಟ ಉಂಟಾಗಿರುತ್ತದೆ.
Advertisement
ಪಾಕಿಸ್ತಾನದಲ್ಲಿ ನನಗೆ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ನನ್ನನ್ನು ಬಿಗ್ ಬಾಸ್ ನಲ್ಲಿ ಜಯಶಾಲಿಯಾಗಿ ಮಾಡಿದರು. ನಾನು ಪಾಕಿಸ್ತಾನ ಸೂಟ್ ಧರಿಸುತ್ತೇನೆ. ಪಾಕಿಸ್ತಾನದ ಅಭಿಮಾನಿಗಳಿಂದ ಕೆಲ ಕೊರಿಯರ್ ಬರುತ್ತವೆ, ಪ್ರತಿಯಾಗಿ ನಾನು ಸಹ ಕಳಿಸುತ್ತೇನೆ. ಇದರಲ್ಲಿ ಏನಾದ್ರೂ ತಪ್ಪಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಜರಫ್ ಅವರ ಸಂಬಂಧಿಯ ಮಗಳ ಮದುವೆ ಕಾರ್ಯಕ್ರಮ ಆಗಸ್ಟ್ ಎರಡನೇ ವಾರದಲ್ಲಿ ನಡೆದಿತ್ತು. ಆಗಸ್ಟ್ 8 ರಂದು ಮಿಕಾ ಸಿಂಗ್ ಹಾಗೂ ಅವರ ತಂಡ ಸಂಗೀತ ಕಾರ್ಯಕ್ರಮ ನೀಡಿತ್ತು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿಟ್ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ಮಿಕಾ ಸಿಂಗ್ ಅವರನ್ನು ಭಾರತೀಯ ಚಿತ್ರರಂಗದಿಂದ ಬ್ಯಾನ್ ಮಾಡಿ ಕ್ರಮ ತೆಗೆದುಕೊಂಡಿತ್ತು.