CinemaCrimeLatestMain PostNational

ಶಿಲ್ಪಾ ಪತಿಗೆ ಮತ್ತೆ ಕಾನೂನು ಸಂಕಟ – ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ ಇಡಿ

ಮುಂಬೈ: ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಈ ಹಿಂದೆ ಅಶ್ಲೀಲ ಚಿತ್ರಗಳ ನಿರ್ಮಾಣ ಹಿನ್ನೆಲೆ ಪೊಲೀಸರು ಅರೆಸ್ಟ್ ಮಾಡಿದ್ದರು. ಕೆಲವು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಕುಂದ್ರಾ, ಡಿಸೆಂಬರ್‌ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಆದರೆ ಮತ್ತೆ ಕುಂದ್ರಾಗೆ ಕಾನೂನು ಸಂಕಟ ಪ್ರಾರಂಭವಾಗಿದ್ದು, ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಕೇಸ್ ದಾಖಲಿಸಿದೆ.

When Raj Kundra spoke about Shilpa Shetty's image being hurt due to his controversies: 'Jhelna hi padega' - Hindustan Times

ಅಶ್ಲೀಲ ಚಿತ್ರಗಳ ನಿರ್ಮಾಣ ಕೇಸ್ ಬೆಳವಣಿಗೆಗಳಿಂದಾಗಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾರ ಘನತೆ ಕುಸಿದಿತ್ತು. ಇದರಿಂದ ಈ ಜೋಡಿ ಸುಧಾರಿಕೊಳ್ಳುತ್ತಿದೆ. ಈ ನಡುವೆ ರಾಜ್‍ಕುಂದ್ರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ‘ಪೋರ್ನ್ ರಾಕೆಟ್ ಕೇಸ್’ನಲ್ಲಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು – ಯಾಸೀನ್ ಮಲಿಕ್ ದೋಷಿ

Shilpa Shetty promises 'to survive challenges' in first post after husband Raj Kundra's arrest in porn case | Entertainment News,The Indian Express

ಈ ವಿಚಾರಣೆಯಲ್ಲಿ ಕುಂದ್ರಾ ಅವರಿಗೆ ಹಣಕಾಸು ವರ್ಗಾವಣೆ ಆಯಾಮದ ಮೇಲೆ ಇಡಿ ಅಧಿಕಾರಿಗಳು ಪ್ರಶ್ನೆಗಳನ್ನ ಕೇಳಲಿದ್ದಾರೆ. ಕೆಲವು ವರದಿಗಳ ಪ್ರಕಾರ ಕಳೆದ ವಾರವೇ ಕುಂದ್ರಾ ವಿರುದ್ಧ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಹಣ ವರ್ಗಾವಣೆಗೆ ಸಂಬಂಧಿಸಿ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Shilpa Shetty's Husband, Businessman Raj Kundra Arrested For Producing Porn Films

ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ ಕುಂದ್ರಾ ಅವರ ವಿರುದ್ಧ ಮುಂಬೈ ಪೊಲೀಸ್ ಅಧಿಕಾರಿಗಳು ದಾಖಲಿಸಿದ್ದ ಎಫ್‍ಐಆರ್ ಪ್ರತಿಯನ್ನ ಸಂಗ್ರಹಿಸಿದ್ದರು. ಈ ಕುರಿತು ಇನ್ನೂ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಆರೋಪಗಳ ಹಿನ್ನೆಲೆ ಇಲ್ಲಿವರೆಗೂ ಶಿಲ್ಪಾ ಮತ್ತು ರಾಜ್ ಕುಂದ್ರಾ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಪ್ರಸ್ತುತ ಶಿಲ್ಪಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಮಕ್ಕಳ ಲಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪ್ರತಿಯೊಂದು ಅಪ್ಡೇಟ್‍ಗಳನ್ನು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಜೈಲಿನಿಂದ ಬಂದ ಮೇಲೆ ರಾಜ್ ಅಪ್ಡೇಟ್ ಕುರಿತು ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ ವಿಧಿವಶ 

Leave a Reply

Your email address will not be published.

Back to top button