ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ‘ಸುಖಿ’ (Sukhee Film) ಸಿನಿಮಾದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈಗ ಶಿಲ್ಪಾ ಶೆಟ್ಟಿ, ಹೊಟ್ಟೆಯಲ್ಲಿದ್ದಾಗ ಗರ್ಭಪಾತ ಮಾಡಿಸುವಂತೆ ಅವರ ತಾಯಿಗೆ ಸಲಹೆ ನೀಡಿದ್ದರ ಬಗ್ಗೆ ನಟಿ ಮಾತನಾಡಿದ್ದಾರೆ. ತಮ್ಮ ಪುನರ್ಜನ್ಮ ಬಗ್ಗೆ ನಟಿ ಭಾವುಕರಾಗಿದ್ದಾರೆ.
ಕರಾವಳಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈಗ ಬಾಲಿವುಡ್‌ನಲ್ಲಿ (Bollywood) ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. 50ರ ಹರೆಯದಲ್ಲಿ 18ರ ಯುವತಿಯಂತೆ ನಟಿ ಮಿಂಚುತ್ತಿದ್ದಾರೆ. ಇಷ್ಟೇಲ್ಲಾ ನೇಮ್ ಫೇಮ್ ನಡುವೆ ತಾವು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ನನ್ನ ತಾಯಿಯ ಗರ್ಭದಲ್ಲಿ ವೇಳೆ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಗರ್ಭಪಾತ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್


ಕನ್ನಡದ ಆಟೋ ಶಂಕರ್, ಒಂದಾಗೋಣ ಬಾ, ಪ್ರೀತ್ಸೋದ್ ತಪ್ಪಾ? ಸಿನಿಮಾಗಳಲ್ಲಿ ಶೆಟ್ಟಿ ನಟಿಸಿದ್ದಾರೆ. ಇದೀಗ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಮೂಲಕ ನಟಿ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ.


