ಅಭಿಮಾನಿಗಳಿಗೆ ಟಿಪ್ಸ್ ನೀಡಿದ ಶಿಲ್ಪಾ ಶೆಟ್ಟಿ

Public TV
1 Min Read
shilpa shetty 1

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಏಕಾಗ್ರತೆ ಹೊಂದೋದು ಹೇಗೆ ಎನ್ನುವುದಕ್ಕೆ ಅಭಿಮಾನಿಗಳಿಗೆ ಟಿಪ್ಸ್ ನೀಡಿದ್ದಾರೆ.

FotoJet 1 44

ರಾಜ್ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಒಂದು ತಿಂಗಳು ಸಂಪೂರ್ಣ ಸೈಲೆಂಟ್ ಆಗಿದ್ದರು. ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಅವರು. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಅವರು ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಸಮಚಿತ್ತ ಹೊಂದೋದು ಹೇಗೆ ಎನ್ನುವ ಬಗ್ಗೆ ಪಾಠವನ್ನು ಅಭಿಮಾನಿಗಳಿಗೆ ಮಾಡಿದ್ದಾರೆ.

ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸುವುದು ಬಹಳ ಮುಖ್ಯವಾಗುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಹೆಚ್ಚಿನ ಮಟ್ಟದ ಶಕ್ತಿಯೊಂದಿಗೆ ಚಟುವಟಿಕೆಗಳಿಂದ ತುಂಬಿರುವ ದಿನ ಅಥವಾ ವಾರವನ್ನು ಆರಂಭಿಸುವಾಗ ಯೋಗಕ್ಕಿಂತ ಉತ್ತಮವಾಗಿ ಏನೂ ಕೆಲಸ ಮಾಡುವುದಿಲ್ಲ. ಏಕ ಪಾದ ವಸಿಷ್ಠಾಸನ ಸಮತೋಲನ, ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಣಿಕಟ್ಟಿನ ನಮ್ಯತೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಭುಜಗಳು ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಈ ದಿನವನ್ನು ಉತ್ಸುಹಕವಾಗಿ ಆರಂಭಿಸಲು ಸಹಾಯ ಮಾಡುತ್ತದೆ. ಇದು ಅಗತ್ಯವೆಂದು ನೀವು ಭಾವಿಸಿದರೆ ಮಾಹಿತಿ ಹಂಚಿಕೊಳ್ಳಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಯೋಗಾ ಮಾಡುತ್ತೀರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆ

SHILPA SHETTY RAJ KUNDRA 2

ಶಿಲ್ಪಾ ಶೆಟ್ಟಿ ವಯಸ್ಸು 46. ಆದಾಗ್ಯೂ ಅವರು ಫಿಟ್ ಆಗಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣುವುದೇ ಇಲ್ಲ. ಇದಕ್ಕೆ ಕಾರಣವಾಗಿದ್ದು ಯೋಗ. ಶಿಲ್ಪಾ ಯೋಗದಲ್ಲಿ ಪಳಗಿದ್ದಾರೆ. ನಿತ್ಯ ಅವರು ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ. ಈಗ ಕೆಲ ಆಸನಗಳನ್ನು ಅವರು ಅಭಿಮಾನಿಗಳಿಗೂ ಹೇಳಿಕೊಟ್ಟಿದ್ದಾರೆ. ಈ ಆಸನಗಳಿಂದ ಏಕಾಗ್ರತೆ ಹಾಗೂ ಸಮಚಿತ್ತ ಹೊಂದಲು ಸಾಧ್ಯ ಎಂದು ಅವರು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *