ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಾಹಾಗೂ ಉದ್ಯಮಿ ರಾಜ್ ಕುಂದ್ರಾ ಅವರ ಶ್ರೇಯಸ್ಸಿಗಾಗಿ ನಿನ್ನೆ ಕರ್ವಾ ಚೌತ್ ವ್ರತ ಹಾಗೂ ಪೂಜೆ ಮಾಡಿದ್ದಾರೆ. ಆದರೆ ಕರ್ವಾ ಚೌತ್ ಪೂಜೆಯಲ್ಲಿ ರಾಜ್ ಕುಂದ್ರಾ ಮಿಸ್ ಆದಂತೆ ಕಾಣುತ್ತಿರುವುದು ಎಲ್ಲಡೆ ಸುದ್ದಿಯಾಗಿದೆ.
ರಾಜ್ ಕುಂದ್ರಾ ಅವರ ಜೊತೆ ವಿವಾಹವಾದಾಗಿನಿಂದ ಶಿಲ್ಪಾ ಶೆಟ್ಟಿ ಅವರು ಪತಿಯ ಜೊತೆ ಕರ್ವಾ ಚೌತ್ ಆಚರಿಸುತ್ತಿದ್ದರು. ಈ ಫೋಟೋವನ್ನು ಪ್ರತಿವರ್ಷ ಹಂಚಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಫೋಟೋ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಭಾರೀ ಸೋಶಿಯಲ್ ಮೀಡಿಯಾದಲ್ಲಿ ಅವರು ಒಬ್ಬರೇ ನಿಂತಿರುವ ಫೋಟೋ ಶೇರ್ ಮಡುವ ಮೂಲಕವಾಗಿ ಅಭಿಮಾನಿಗಳಿಗೆ ಗೊಂದಲ ಉಂಟು ಮಾಡಿದ್ದಾರೆ. ಇದನ್ನೂ ಓದಿ: ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!
View this post on Instagram
ಶಿಲ್ಪಾ ಶೆಟ್ಟಿ ಅವರ 12ನೇಕರ್ವಾ ಚೌತ್ ಇದಾಗಿದ್ದು, ಅವರು ಪ್ರತಿ ಸಲದಂತೆ ಈ ಸಲವೂ ಪತಿ ರಾಜ್ ಕುಂದ್ರಾಗಾಗಿ ಈ ವ್ರತವನ್ನು ಮಾಡಿದ್ದಾರೆ. ಆದರೆ ಈ ಸಲ ಅವರು ತಮ್ಮ ಫೋಟೋವನ್ನು ಮಾತ್ರ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!
ಪತಿಯ ದೀರ್ಘಾಯುವಿಗಾಗಿ ಇಡೀ ದಿನ ಉಪವಾಸ ಮಾಡಿ, ನಂತರ ಚಂದ್ರನ ದರ್ಶನ ಪಡೆದು, ಆಗಲೇ ಪತಿಯ ಮುಖ ನೋಡಿ, ಅವರ ಕೈಯಿಂದಲೇ ನೀರು ಕುಡಿದು ವ್ರತ ಪೂರ್ಣಗೊಳಿಸುತ್ತಾರೆ. ಈ ಸಲವೂ ವ್ರತ ಮಾಡಿರುವ ಶಿಲ್ಪಾ ಶೆಟ್ಟಿ, ಪತಿಯ ಜೊತೆ ಇದನ್ನು ಮಾಡಿದ್ದಾರೆಯೇ ಅನ್ನೋ ಅನುಮಾನ ಅವರು ಮಾಡಿರುವ ಪೋಸ್ಟ್ ನಿಂದ ಕಾಡಲಾರಂಭಿಸಿದೆ.