ಪ್ರತಿ ಗಣೇಶ ಹಬ್ಬಕ್ಕೂ ಮುಂಬೈನ ಲಾಲ್‌ಬಗೂಚ ರಾಜ ಗಣಪತಿ ಪೆಂಡಾಲ್‌ಗೆ (Lalbaugcha Raja Pandal) ಬಾಲಿವುಡ್ ತಾರೆಯರು ಭೇಟಿ ಕೊಡುವ ಪದ್ಧತಿ ಇದೆ. ಹೇಳಿ ಕೇಳಿ ಇದು ಸಾರ್ವಜನಿಕ ಗಣಪತಿ ಜನಸಂದಣಿ ಹೆಚ್ಚಾಗಿರುತ್ತೆ. ಭೇಟಿಕೊಡುವ ತಾರೆಯರಿಗೆ ಪೊಲೀಸ್ ಭದ್ರತೆಯೂ ಇರುತ್ತೆ. ಹೀಗಾಗಿ ಪ್ರತಿ ವರ್ಷದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈ ಬಾರಿಯೂ ಸಾರ್ವಜನಿಕ ಗಣೇಶ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ತಮಗೆ ಭದ್ರತೆ ಕೊಡುತ್ತಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆಯೇ ಬೇಸರಗೊಂಡಿದ್ದಾರೆ. ಅವರನ್ನು ಕೈಯಿಂದ ತಳ್ಳಿ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಶಿಲ್ಪಾ ವರ್ತನೆಗೆ ಪರ ವಿರೋಧದ ಟೀಕೆ ಟಿಪ್ಪಣಿ ಜೋರಾಗಿದೆ.
ಗಣಪತಿ ಪೆಂಡಾಲ್‌ಗೆ ಶಿಲ್ಪಾ ಶೆಟ್ಟಿ ಆಗಮಿಸಿದ್ದ ವೇಳೆ ಸುತ್ತ ಮುತ್ತ ಜನಸಂದಣಿ ಕಂಟ್ರೋಲ್ ಮಾಡಲು ಪೊಲೀಸರ ಭದ್ರತೆ ಇತ್ತು. ಅಲ್ಲೇ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪಕ್ಕದಿಂದ ಓಡಿಬಂದು ಶಿಲ್ಪಾ ಶೆಟ್ಟಿಯ ಭುಜ ಹಿಡಿದು `ಮೇಡಮ್ ಒಂದು ಸೆಲ್ಫಿ’ ಎಂದು ಹೇಳುತ್ತಾ ಫೋಟೋ ಕ್ಲಿಕ್ ಮಾಡಲು ಮುಂದಾಗ್ತಾರೆ. ಈ ವೇಳೆ ಸೆಲ್ಫಿಯನ್ನು ನಿರಾಕರಿಸುವ ಶಿಲ್ಪಾ ಸಮವಸ್ತç ಧರಸಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ನ್ನು ತಳ್ಳುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕಟುವಾಗೇ ಹೇಳ್ತಾರೆ. ಇಷ್ಟು ಸಾಲದು ಎಂಬAತೆ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಕೂಡ ಕಾನ್ಸ್ಟೇಬಲ್‌ಗೆ `ಹಾಗೆಲ್ಲಾ ಮಾಡಬೇಡಿ’ ಎಂದಿದ್ದಾರೆ. ಈ ದೃಶ್ಯ ಬಹಳ ವೈರಲ್ ಆಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ
View this post on Instagram
ಶಿಲ್ಪಾ ಶೆಟ್ಟಿ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಶಿಲ್ಪಾರನ್ನು ಮುಟ್ಟಿ ಸೆಲ್ಫಿ ಕೊಡಿ ಎಂದು ಕೇಳಿದ್ದು ತಪ್ಪಿರಬಹುದು. ಆದರೆ ಅವರು ಹೆಣ್ಣು ಎಂಬ ಸಲುಗೆಯಿಂದ ಈ ರೀತಿ ಕೇಳಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸೆಲ್ಫಿ ಕೊಡಲು ನಿರಾಕರಣ ಮಾಡಿದ್ದರೂ ನಡೆಯುತ್ತಿತ್ತು, ಬದಲಿಗೆ ಶಿಲ್ಪಾ ತಳ್ಳಿದ್ದು ಸರಿಯಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್