ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟಿಪ್ಪು ಜಯಂತಿಗೆ ಹೇಳಿಕೆಗೆ ಗೋಲ್ಡನ್ ಸ್ಟಾರ್ ಪತ್ನಿ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶಿಲ್ಪಾ ಗಣೇಶ್ ಪ್ರಶ್ನಿಸಿ ಮೂಲಕ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಕುರಿತು ಟ್ವಿಟ್ಟರಿನಲ್ಲಿ, “ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
Advertisement
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ.
ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ,ವೀರ ಸಿಂಧೂರ ಲಕ್ಷ್ಮಣ,ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ?#TippuJayanthi
— Siddaramaiah (@siddaramaiah) November 10, 2018
Advertisement
ಅಲ್ಲದೇ ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ, ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನ್ನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ಧಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ ಎಂದು ಟ್ವೀಟ್ ಮಾಡಿ ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಂಡಿದ್ದರು.
Advertisement
ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ ಲೂಟಿ ಮಾಡಿದ್ದ ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ, ಟಿಪ್ಪು ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನ್ನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ದಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ.#TippuJayanthi @INCKarnataka
— Siddaramaiah (@siddaramaiah) November 10, 2018
Advertisement
ಇದಕ್ಕೆ ಶಿಲ್ಪಾ ಗಣೇಶ್ ಸಿದ್ದರಾಮಯ್ಯನವರ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿ “ದೇಶವಿರೋಧಿ ಘೋಷಣೆ ಕೂಗುವುದು, ದೇಶ ದ್ರೋಹಿಗಳಿಗೆ ಜೈಕಾರ ಹಾಕುವುದು, ಬೆಂಬಲಿಸುವುದು, ಭಗವದ್ಗೀತೆ ಸುಡುವುದು, ಹಿಂದೂ ಧರ್ಮವನ್ನು-ದೇವರನ್ನು ಅವಮಾನಿಸುವುದು, ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ, ನೀನು ಸಂವಿಧಾನ ವಿರೋಧಿ, ಕೋಮುಗಲಭೆಯ ಪ್ರಚೋದಕ, ಸಮಾಜ ಘಾತುಕ” ಎಂದು ಬರೆದು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
1.ದೇಶವಿರೋಧಿ ಘೋಷಣೆ ಕೂಗುವುದು,ದೇಶ ದ್ರೋಹಿಗಳಿಗೆಜೈಕಾರಹಾಕುವುದು,ಬೆಂಬಲಿಸುವುದು,ಭಗವದ್ಗೀತೆ ಸುಡುವುದು,ಹಿಂಧೂ ಧರ್ಮವನ್ನು-ದೇವರನ್ನು ಅವಮಾನಿಸುವುದು,ಹಿಂಧೂ ದೇವಾಲಯಗಳನ್ನು ಧ್ವಂಸಮಾಡುವುದು,ಅಭಿವ್ಯಕ್ತಿ ಸ್ವಾತಂತ್ರ್ಯ.ಆದರೆ,ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ,ನೀನು ಸಂವಿಧಾನವಿರೋಧಿ,ಕೋಮುಗಲಭೆಯಪ್ರಚೋದಕ, ಸಮಾಜ ಘಾತುಕ. pic.twitter.com/bNd8mz39sP
— Shilpa Ganesh (@ShilpaaGanesh) November 15, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews