Bengaluru CityDistrictsKarnatakaLatest

ಸಿಎಂ ಕುಮಾರಸ್ವಾಮಿ ಬಜೆಟ್ ವಿರುದ್ಧ ಶಿಲ್ಪಾ ಗಣೇಶ್ ಗರಂ!

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಈ ಬಜೆಟ್ ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿಲ್ಪಾ ಗಣೇಶ್ ಕಿಡಿಕಾರಿದ್ದಾರೆ.

ಇದನ್ನು ಗಮನಿಸಿದ ಶಿಲ್ಪಾ ಗಣೇಶ್ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಕುಮಾರಸ್ವಾಮಿಯವರೇ. ಕರ್ನಾಟಕ ಅಂದರೆ ಕೇವಲ ಹಾಸನ, ಮಂಡ್ಯ, ಮೈಸೂರು ಮಾತ್ರ ಅಲ್ಲ. ಕರಾವಳಿ ಮತ್ತು ಉತ್ತರ ಕರ್ನಾಟಕವೂ ಸೇರಿವೆ” ಎಂದು ಬರೆದುಕೊಂಡಿದ್ದಾರೆ.

ಇಡೀ ಬಜೆಟ್ ನನ್ನು ಗಮನಿಸಿದ್ರೆ ಹಾಸನ, ಮೈಸೂರು, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರಕ್ಕೆ ಹೆಚ್ಚಿನ ಒತ್ತು ನೀಡಿರುವುದಾಗಿ ಬಿಜೆಪಿಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ನ ಕೆಲ ಮಾಜಿ ಸಚಿವರುಗಳು ಕೂಡ ಇಂದಿನ ಬಜೆಟ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ, ಅಲ್ಪಸಂಖ್ಯಾತರ ಕಡೆಗಣನೆ: ಸಿಎಂ ವಿರುದ್ಧ ಎಚ್.ಕೆ ಪಾಟೀಲ್, ತನ್ವೀರ್ ಸೇಠ್ ಅಸಮಾಧಾನ

Shilpa ganesh tweet

Related Articles

5 Comments

  1. “ಕುಮಾರಸ್ವಾಮಿಯವರೇ. ಕರ್ನಾಟಕ ಅಂದರೆ ಕೇವಲ ಹಾಸನ, ಮಂಡ್ಯ, ಮೈಸೂರು ಮಾತ್ರ ಅಲ್ಲ. ಕರಾವಳಿ ಮತ್ತು ಉತ್ತರ ಕರ್ನಾಟಕವೂ ಸೇರಿವೆ”

  2. C M sir….ಅತಿಥಿ ಉಪನ್ಯಾಸಕರ ಅಳಲಿನ ಬಗ್ಗೆ ಕಿಂಚಿತ್ ಕರುಣೆಯಾದರು ಇರಲಿ ನಮಗೆ ತಾತ್ಕಾಲಿಕ ಸೇವಾ ಭದ್ರತೆ ಕೊಡುವ ನಿರ್ಧಾರ ಮಾಡಿ ನೀವು ಕರುಣಾಮಯಿ ಕುಮಾರಸ್ವಾಮಿ ದಯವಿಟ್ಟು ನಮಗೆ ದಾರಿ ದೀಪವಾಗಿ

  3. Sala mannana Bari hale Mysore GE matra madilla 34000 crore. Adralli poor thy karnataka ede

Leave a Reply

Your email address will not be published. Required fields are marked *