ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.
ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದ ಭೋಜನ ವಿರಾಮದ ಮೊದಲೇ ಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ. 2006ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ 99 ರನ್, 1967ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು.
Advertisement
Advertisement
ಶಿಖರ್ ಧವನ್ 47 ಎಸೆತಗಳಲ್ಲಿ 50 ರನ್ (10 ಬೌಂಡರಿ, 1 ಸಿಕ್ಸ್) ಗಳಿಸಿದ್ದರು. ಮುಂದಿನ 40 ಎಸೆತಗಳಲ್ಲಿ ಶತಕ ದಾಖಲಿಸಿದ ಅವರು 18 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದರು. ಮೊದಲ ವಿಕೆಟ್ ಗೆ ಮುರಳಿ ವಿಜಯ್ ಜೊತೆ 172 ಎಸೆತಗಳಲ್ಲಿ 168 ರನ್ ಜೊತೆಯಾಟವಾಡಿದ್ದ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾದರು.
Advertisement
ಬೌಲರ್ ಯಾಮಿನ್ ಅಹ್ಮದ್‍ಜೈ ಎಸೆತದಲ್ಲಿ ಶಿಖರ್ ಧವನ್ ಮೊಹ್ಮದ್ ನಬಿಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.