ಲಂಡನ್: ವಿಶ್ವಕಪ್ ಟೂರ್ನಿಯ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತೆ ವಾಪಸ್ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಗಾಯಗೊಂಡ ಬಳಿಕ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಧವನ್, ಟ್ವಿಟ್ಟರ್ ನಲ್ಲಿ ಡಾ. ರಾಹತ್ ಇಂದೋರಿ ಅವರ ಕವಿತೆಯನ್ನು ಹಂಚಿಕೊಂಡಿದ್ದು, ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
Advertisement
Advertisement
ಧವನ್ ಸದ್ಯ ತಂಡದಿಂದ ಹೊರಗುಳಿದಿದ್ದರು ಕೂಡ ಬಿಸಿಸಿಐ ಅವರನ್ನು ಇಂಗ್ಲೆಂಡ್‍ನಲ್ಲಿಯೇ ಉಳಿಸಿಕೊಂಡಿದೆ. ಆ ಮೂಲಕ ಬಹುಬೇಗ ಚೇತರಿಕೆಗೆ ಸಹಕಾರ ಆಗುವಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯುತ್ತಿದ್ದಾರೆ. ಇತ್ತ ಧವನ್ ಸ್ಥಾನದಲ್ಲಿ ರಿಷಬ್ ಪಂತ್ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದು, ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ ಪಂತ್ ಅವಗಿಂತ ಹೆಚ್ಚಿನ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಆಡುವ 11 ಬಳಗದಲ್ಲಿ ಇದ್ದರು ಅಚ್ಚರಿ ಸಂಗತಿ ಏನು ಅಲ್ಲ.
Advertisement
Kabhi mehek ki tarah hum gulon se udte hain…
Kabhi dhuyein ki tarah hum parbaton se udte hain…
Ye kainchiyaan humein udne se khaak rokengi…
Ke hum paron se nahin hoslon se udte hain…#DrRahatIndori Ji pic.twitter.com/h5wzU2Yl4H
— Shikhar Dhawan (@SDhawan25) June 12, 2019
Advertisement
ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಇಂದು ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದ್ದು, ಈ ವೇಳೆ ಧವನ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದರು. ಇತ್ತ ವಿಶ್ವಕಪ್ ಟೂರ್ನಿಗಳಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ 4 ರಲ್ಲಿ ಸೋತಿದೆ.
ವಿಶ್ವಕಪ್ ನಲ್ಲಿ 16 ವರ್ಷಗಳ ಹಿಂದೆ ಅಂದರೆ 2003 ರಲ್ಲಿ ಇತ್ತಂಡಗಳು ಮುಖಾಮುಖಿ ಆಗಿದ್ದವು. ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತಿದ್ದ ಜಹೀರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.
All my wishes and support to #AshwinFoundation– @ashwinravi99 pic.twitter.com/koKoG85a8g
— Shikhar Dhawan (@SDhawan25) June 12, 2019