ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರ್ ಅಶ್ವಿನ್ ಐಪಿಎಲ್ 12ನೇ ಆವೃತ್ತಿಯ ಆರಂಭದಲ್ಲಿ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ ಬಳಿಕ ಭಾರೀ ಚರ್ಚೆ ನಡೆದಿತ್ತು. ಆದರೆ ಶನಿವಾರ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಶಿಖರ್ ಧವನ್ ಗೆ ಅಶ್ವಿನ್ ಮಂಕಡ್ ರನೌಟ್ ವಾರ್ನಿಂಗ್ ನೀಡಿ ಸುದ್ದಿಯಾಗಿದ್ದಾರೆ.
ಮಂಕಡ್ ಕುರಿತು ತೀವ್ರವಾದ ವಿಮರ್ಶೆಗಳು ಎದುರಾದ ಬಳಿಕವೂ ಐಪಿಎಲ್ ನಲ್ಲಿ ಮಕಂಡ್ ರನೌಟ್ ಎಚ್ಚರಿಕೆಯ ಪ್ರಸಂಗಗಳು ಮುಂದುವರಿಯುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಕೋಲ್ಕತ್ತಾ ಪಂದ್ಯದಲ್ಲಿ ಸುನೀಲ್ ನರೈನ್ ಆರ್ ಸಿಬಿ ನಾಯಕ ಕೊಹ್ಲಿಗೆ ಮಂಕಡ್ ಎಚ್ಚರಿಕೆ ನೀಡಿದ್ದು ಸುದ್ದಿಯಾಗಿತ್ತು.
WATCH: Shikhar's dance moves on the crease
????️????️https://t.co/KtJkaIpubw
— IndianPremierLeague (@IPL) April 20, 2019
ಪಂದ್ಯದಲ್ಲಿ ತಮ್ಮ ಮೂರನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ಧವನ್ ಗೆ ಅಶ್ವಿನ್ ಮಂಕಡ್ ರನೌಟ್ ಎಚ್ಚರಿಕೆ ನೀಡಿದರು. ಆದರೆ ಈ ಬಗ್ಗೆ ಎಚ್ಚರಿಕೆ ವಹಿಸಿದ್ದ ಧವನ್ ಕ್ರಿಸ್ ಬಿಟ್ಟು ಮುಂದೆ ಹೋಗಿರಲಿಲ್ಲ. ಮರು ಎಸೆತ ಬೌಲ್ ಮಾಡಲು ಬಂದ ಅಶ್ವಿನ್ ರನ್ನು ಟ್ರೋಲ್ ಮಾಡಿದ ಧವನ್ ಕೆಲ ಡಾನ್ಸ್ ಸ್ಟೆಪ್ಸ್ ಹಾಕುವ ಮೂಲಕ ಕಾಲೆಳೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಡೆಲ್ಲಿ 5 ವಿಕೆಟ್ ಗೆಲುವು ಪಡೆದಿತ್ತು.
ಇತ್ತ ಬಗ್ಗೆ ಡೇಲ್ ಸ್ಟೇನ್ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸ್ಟೇನ್, ಬುಮ್ರಾ- ಬೌಲ್ಡ್, ರಬಾಡ- ಕ್ಯಾಚ್, ತಹೀರ್- ಎಲ್‍ಬಿಡ್ಯ್ಲೂ, ಅಶ್ವಿನ್- ಮಕ್ಕಂಡ್ ರನೌಟ್ ಎಂದು ಬರೆದುಕೊಂಡು ಕಾಲೆಳೆದಿದ್ದಾರೆ.
Bumrah- Bowled
Rabada- Caught
Tahir- Lbw
Ashwin- Mankad
All bases covered there Pdog ????
— Dale Steyn (@DaleSteyn62) April 20, 2019