ನೇಪಿಯರ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ 5 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ವೇಗವಾಗಿ 5 ಸಾವಿರ ರನ್ ಹೊಡೆದ ವಿಶ್ವದ 4ನೇ ಆಟಗಾರ ಎಂಬ ಹೆಗ್ಗಳಿಕೆಯಯನ್ನು ಪಡೆದಿದ್ದಾರೆ.
ಶಿಖರ್ ಧವನ್ ಭಾರತದ ಪರ ವೇಗವಾಗಿ 5 ಸಾವಿರ ರನ್ ಪೂರೈಸಿದ 2ನೇ ಆಟಗಾರರಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 114 ಇನ್ನಿಂಗ್ಸ್ ಗಳಲ್ಲಿ ಇದೇ ಸಾಧನೆ ಮಾಡಿ ಮೊದಲ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್‍ನ ತಂಡದ ಮಾಜಿ ಆಟಗಾರ, ಲಾರಾ ದಾಖಲೆಯನ್ನು ಧವನ್ ಸರಿಗಟ್ಟಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 5 ಸಾವಿರ ರನ್ ಹೊಡೆದ 4ನೇ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 10 ರನ್ ಗಳಿಸಿದ ವೇಳೆ ಧವನ್ 5 ಸಾವಿರ ರನ್ ಪೂರ್ಣಗೊಳಿಸಿದರು.
Advertisement
???? MILESTONE ALERT ????
Shikhar Dhawan becomes the second fastest Indian to 5,000 ODI runs in the first ODI against New Zealand.#NZvIND LIVE ???? https://t.co/Wslkq5ocbd pic.twitter.com/p7nNkSsNoz
— ICC (@ICC) January 23, 2019
Advertisement
ಅಂದಹಾಗೇ ಧವನ್ 118 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಲಾರಾ ಕೂಡ 118 ಇನ್ನಿಂಗ್ಸ್ ಗಳಲ್ಲಿ 5 ಸಾವಿರ ರನ್ ಗಳ ಗಡಿ ದಾಟಿದ್ದರು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಾಶೀಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದು, 101 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸಿನ ವಿವಿಯನ್ ರಿಚರ್ಡ್ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ 2ನೇ ಸ್ಥಾನದಲ್ಲಿ ಪಡೆದಿದ್ದಾರೆ. ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ 119 ಇನ್ನಿಂಗ್ಸ್, ವೆಸ್ಟ್ ಇಂಡೀಸಿನ ಗಾರ್ಡನ್ ಗ್ರೀನಿಡ್ಜ್ 121 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 124 ಇನ್ನಿಂಗ್ಸ್, ಸೌರವ್ ಗಂಗೂಲಿ 126 ಇನ್ನಿಂಗ್ಸ್ ಗಳಲ್ಲಿ 5 ಸಾವಿರ ರನ್ ಪೂರೈಸಿದ್ದರು.
Advertisement
ಧವನ್ ಕಳೆದ 9 ಇನ್ನಿಂಗ್ಸ್ ಗಳಲ್ಲಿ 1 ಅರ್ಧ ಶತಕವನ್ನು ಸಿಡಿಸಿಲ್ಲ. ನ್ಯೂಜಿಲೆಂಡ್ ಸರಣಿಯಲ್ಲಿ ಮತ್ತೆ ಫಾರ್ಮ್ ಗೆ ಮರಳುವ ವಿಶ್ವಾಸದಲ್ಲಿ ಧವನ್ ಇದ್ದಾರೆ. ಮುಂದಿನ 2019 ರ ವಿಶ್ವಕಪ್‍ಗೆ ಅನುಭವಿ ಆರಂಭಿಕರ ಅಗತ್ಯ ಇರುವುದರಿಂದ ಧವನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇತ್ತ ಯುವ ಆಟಗಾರರಾದ ಶುಭಮನ್ ಗಿಲ್ ಹಾಗೂ ಪೃಥ್ವಿ ಶಾ ಅವಕಾಶಕ್ಕಾಗಿ ಕಾದು ನೋಡುತ್ತಿದ್ದಾರೆ. ಆಸೀಸ್ ಏಕದಿನ ಸರಣಿಯಲ್ಲಿ ಧವನ್ ಕೇವಲ 55 ರನ್ ಗಳಷ್ಟೇ ಗಳಿಸಿದ್ದರು.
Advertisement
5000 ODI runs for @SDhawan25.
He is the second fastest Indian to achieve this feat ???????? pic.twitter.com/LhlKjvtBRc
— BCCI (@BCCI) January 23, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv