ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಮದ್ವೆ ತಯಾರಿ ನಡೆಸಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಮದ್ವೆ ಮಾಡಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದವು. ಯಾರ ಜೊತೆ ವಿವಾಹವಾಗುತ್ತಾರೆ ಎನ್ನುವ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.
View this post on Instagram
ಐರಿಶ್ ಮೂಲದ ಸೋಫಿ ಶೈನ್ (Sophie Shine) ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಧವನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಮೊದ್ಲು ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಜೊತೆಗೆ ಮದ್ವೆಯಾಗಿದ್ದ ಧವನ್ 2023ರಲ್ಲಿ ಅವರಿಂದ ವಿಚ್ಚೇದನ ಪಡೆದಿದ್ದರು. ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
ಶಿಖರ್ ಮತ್ತು ಸೂಫಿ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಹಸೆಮಣೆ ಏರುವ ಹಂತಕ್ಕೆ ತಲುಪಿದೆ. ಅಂದಹಾಗೆ ಸೋಫಿ, ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರೂ ಆಗಿದ್ದಾರೆ. ಇದನ್ನೂ ಓದಿ: ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!

