ಧವನ್ ಸ್ಫೋಟಕ ಬ್ಯಾಟಿಂಗ್, ಭುವಿ ಭರ್ಜರಿ ಬೌಲಿಂಗ್ – ಭಾರತಕ್ಕೆ 28 ರನ್‍ಗಳ ಜಯ

Public TV
1 Min Read
Bhuvneshwar Kumar shikar dhawan

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ -20 ಪಂದ್ಯವನ್ನು ಭಾರತ 28 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 204 ರನ್ ಗಳ ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ವೇಗಿ ಭುವನೇಶ್ವರ್ ಕುಮಾರ್ 4 ಓವರ್ ಗಳಲ್ಲಿ 24 ರನ್ ನೀಡಿ 5 ವಿಕೆಟ್ ಕೀಳುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.

Shikhar Dhawan 6

ಒಂದು ಹಂತದಲ್ಲಿ 48 ರನ್‍ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರೀಝ ಹೆಂಡ್ರಿಕ್ಸ್ ಮತ್ತು ಬೆಹರ್ಡಿನ್ ನಾಲ್ಕನೇಯ ವಿಕೆಟ್ ಗೆ 81 ರನ್‍ಗಳ ಜೊತೆಯಾಟವಾಡಿ ಅಪಾಯದಿಂದ ಪಾರು ಮಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳು ಜಾಸ್ತಿ ಹೊತ್ತು ನಿಲ್ಲದ ಕಾರಣ ದಕ್ಷಿಣ ಆಫ್ರಿಕಾ ಸೋಲನ್ನು ಒಪ್ಪಿಕೊಂಡಿತು.

ರೀಝ ಹೆಂಡ್ರಿಕ್ಸ್ 70 ರನ್(50 ಎಸೆತ, 8 ಬೌಂಡರಿ, 1 ಸಿಕ್ಸರ್) ಫರ್ಹಾನ್ ಬೆಹರ್ಡಿನ್ 39 ರನ್(27 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಭುವನೇಶ್ವರ್ ಕುಮಾರ್ 5 ವಿಕೆಟ್ ಪಡೆದರೆ, ಜೈದೇವ್ ಉನಾದ್ಕತ್, ಹಾರ್ದಿಕ್ ಪಾಂಡ್ಯಾ , ಚಹಲ್ ತಲಾ ಒಂದು ವಿಕೆಟ್ ಪಡೆದರು.

ಭಾರತದ ಪರ ಶಿಖರ್ ಧವನ್ 72 ರನ್(39 ಎಸೆತ, 10 ಬೌಂಡರಿ, 2 ಸಿಕ್ಸರ್) ವಿರಾಟ್ ಕೊಹ್ಲಿ 26 ರನ್(20 ಎಸೆತ, 2 ಬೌಂಡರಿ, 1ಸಿಕ್ಸರ್), ಮನೀಶ್ ಪಾಂಡೆ ಔಟಾಗದೇ 29 ರನ್(27 ಎಸೆತ, 1 ಸಿಕ್ಸರ್) ಹೊಡೆದರು.

ಜೂನಿಯರ್ ಡಾಲ 2 ವಿಕೆಟ್ ಪಡೆದರೆ, ಕ್ರಿಸ್ ಮೊರಿಸ್, ತಬ್ರೈಜ್ ಶಂಸಿ, ಯಂಡಿಲ್ ಫೆಲುಕ್ವಾಯೊ ತಲಾ ಒಂದೊಂದು ವಿಕೆಟ್ ಪಡೆದರು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಟಿ 20 ಪಂದ್ಯ ಬುಧವಾರ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Bhuvneshwar Kumar

Suresh Raina

Suresh Raina 2

Shikhar Dhawan 7

Shikhar Dhawan 5

Shikhar Dhawan 4

Shikhar Dhawan 3

Shikhar Dhawan 2

Shikhar Dhawan 1

shikar dhawan 8

raina

kohli

kohli 3

kohli 2

Jasprit Bumra 2

Jasprit Bumra 1

dhoni 4

dhoni 3

dhoni 2

dhoni 1

Share This Article
Leave a Comment

Leave a Reply

Your email address will not be published. Required fields are marked *