Connect with us

Districts

ಮತ್ತೆ ಮೊಬೈಲ್ ಟವರ್ ಏರಿದ ಶಿಗ್ಲಿ ಬಸ್ಯಾ

Published

on

ಹಾವೇರಿ: ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಬೆರಳು ಕಚ್ಚಿದ ಪ್ರಕರಣದ ಕುರಿತು ಬಹಿರಂಗ ವಿಚಾರಣೆ ನಡೆಸುವಂತೆ ಆಗ್ರಹಿಸಿ ಪ್ರಕರಣದ ಆರೋಪಿಯಾಗಿರೋ ಶಿಗ್ಲಿ ಬಸ್ಯಾ ಮೊಬೈಲ್ ಟವರ್ ಏರಿ ಕುಳಿತು ಆತಂಕ ಮೂಡಿಸಿದ್ದಾನೆ.

ಹಾವೇರಿ ನಗರದ ವಿದ್ಯಾನಗರದಲ್ಲಿರುವ ಮೊಬೈಲ್ ಟವರ್ ಏರಿ ಜನರಲ್ಲಿ ಆತಂಕ ಮೂಡಿಸಿದ್ದಾನೆ. 2011 ರಲ್ಲಿ ಹಾವೇರಿ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಬೆರಳು ಕಚ್ಚಿದ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ. ನಾಲ್ಕು ಗೋಡೆ ಮಧ್ಯೆ ವಿಚಾರಣೆ ನಡೆಸದೇ, ಬಹಿರಂಗ ವಿಚಾರಣೆ ನಡೆಸುವಂತೆ ಒತ್ತಾಯಿಸಿದನು.

ಸಾರ್ವಜನಿಕರ ಸಮ್ಮುಖದಲ್ಲಿ ವಿಚಾರಣೆ ನಡೆಸಬೇಕು. ಇದೇ ತಿಂಗಳ ಅಕ್ಟೋಬರ್ 31 ರಂದು ನ್ಯಾಯಾಲಯದಲ್ಲಿ ವಿಚಾರಣೆಯ ಹಿನ್ನೆಲೆಯಲ್ಲಿ ಶಿಗ್ಲಿ ಬಸ್ಯಾ ಟವರ್ ಏರಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಮನವೊಲಿಕೆ ಮಾಡಿದ್ದಾರೆ.

ಒಂದೂವರೆ ಗಂಟೆಗಳ ಕಾಲ ಮೊಬೈಲ್ ಟವರ್ ನಲ್ಲಿ ಕುಳಿತಿದ್ದ ಬಸ್ಯಾನನ್ನ ಕೆಳಗಿಳಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Click to comment

Leave a Reply

Your email address will not be published. Required fields are marked *