ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Siggoan By Election) ಹಿನ್ನೆಲೆ ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಪತ್ನಿ ಇಬ್ಬನಿ ಜೊತೆ ಹಾಗೂ ಕಾರ್ಯಕರ್ತರ ಸಮೇತ ಆಗಮಿಸಿ ನಾಮಪತ್ರ ಸಲ್ಲಿಸಿದರು. ಶಿಗ್ಗಾಂವಿ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾ ಅಧಿಕಾರಿ ಮಹಮ್ಮದ್ ಖಿಝರ್‌ಗೆ ನಾಮಪತ್ರವನ್ನ ಸಲ್ಲಿಸಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಯಿ ಹೇಳಿದಂತೆ ಒಳ್ಳೆಯ ಮೂಹರ್ತ ನೋಡಿ ನಾಮಪತ್ರ ಸಲ್ಲಿಸಿದ್ದೇವೆ. ತಂದೆ-ತಾಯಿ ಗುರು ಹಿರಿಯ ಆರ್ಶೀವಾದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಬಹಿರಂಗವಾಗಿ, ಮೆರವಣಿಗೆ ಮೂಲಕ ಆಗಮಿಸಿ ಪಕ್ಷದ ವರಿಷ್ಠರು, ಹಾಗೂ ಯಡಿಯೂರಪ್ಪ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಸುತ್ತೇವೆ. ಈಗಾಗಲೇ ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ
ಗುರು-ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದೇನೆ. ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗುತ್ತೇನೆ. 2023 ರಲ್ಲಿ ನಮ್ಮ ತಂದೆಯ ಪರವಾಗಿ ಮತಯಾಚನೆ ಮಾಡಿದ್ದೆ. ಈಗ ಪಕ್ಷ ನನಗೆ ಟಿಕೆಟ್ ನೀಡಿದೆ. ನಾನೇ ಮತಯಾಚನೆ ಮಾಡುತ್ತಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಣಾಳಿಕೆ ಸಹ ಬಿಡುಗಡೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋದ ಹಾಸ್ಟೆಲ್ ವಿದ್ಯಾರ್ಥಿ ಸಾವು
ಅಲ್ಲದೇ ಭರತ್ ಬೊಮ್ಮಾಯಿ ಲಕ್ಕಿ ವಾಹನ ಸ್ಕಾರ್ಪಿಯೋ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದು ವಿಶೇಷವಾಗಿದ್ದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಹ ಇದೇ ವಾಹನದಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: ಮೆಡಿಕಲ್ ರಿರ್ಪೋಟ್‌ನಲ್ಲಿ ದರ್ಶನ್‌ಗೆ L5 S1ನಲ್ಲಿ ಸಮಸ್ಯೆ ಇರುವುದು ದೃಢ- ನಾಳೆ ಜೈಲಿಗೆ ಪತ್ನಿ ಭೇಟಿ