ಹಾವೇರಿ: ಗೊಟಗೋಡಿಯಲ್ಲಿರುವ ಜಾನಪದ ವಿವಿ ಘಟಿಕೋತ್ಸವದಲ್ಲಿ (Janapada University Convocation) ಶಿಗ್ಗಾಂವಿಯ ನೂತನ ಕಾಂಗ್ರೆಸ್ ಶಾಸಕ ಯಾಸಿರ್ ಅಹಮದ್ ಖಾನ್ ಪಠಾಣ್ (Yasir Ahmad Kha Patan) ಹಾಗೂ ಬೆಂಬಲಿಗರು ದರ್ಪ ತೋರಿದ್ದಾರೆ.
ಘಟಿಕೋತ್ಸವದ ಹಿನ್ನೆಲೆಯಲ್ಲಿ ಜಾನಪದ ವಿವಿ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪಾಲ್ಗೊಂಡಿದ್ದರು.
Advertisement
ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕರು ಆಗಮಿಸಿದ್ದಾರೆ. ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಮುಂದೆ ಆಗಮಿಸಿ ನನ್ನನ್ನು ವೇದಿಕೆ ಕರೆದಿಲ್ಲ. ನಾನು ವಿವಿಗೆ ಬಂದರೂ ಯಾರೂ ಸ್ವಾಗತಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಅವರ ಬೆಂಬಲಿಗರು ನಮ್ಮ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎಂದು ಪ್ರಶ್ನಿಸಿ ಸಿಬ್ಬಂದಿಯ ಜೊತೆಗೆ ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಇದೆ, ಈಗ ವಿಚಾರಣೆಗೆ ಬರಲು ಸಾಧ್ಯವಿಲ್ಲ – ಪೊಲೀಸರಿಗೆ ಚಂದ್ರಶೇಖರ ಶ್ರೀ ಪತ್ರ
Advertisement
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ಸಭಿಕರು ಏನಿದು? ವಿಶ್ವವಿದ್ಯಾಲಯಗಳ ಘಟಿಕೋತ್ಸವಕ್ಕೆ ಶಾಸಕರಿಗೆ ಆಹ್ವಾನ ಇಲ್ಲ ಎಂಬ ಕನಿಷ್ಟ ಶಿಷ್ಟಾಚಾರದ ತಿಳುವಳಿಕೆ ಇಲ್ಲ ಎಂದು ಮಾತನಾಡತೊಡಗಿದರು.
ವಿಶ್ವವಿದ್ಯಾಲಯ ಸಿಬ್ಬಂದಿ ಶಿಷ್ಟಾಚಾರದ ಪ್ರಕಾರವೇ ನಡೆದುಕೊಂಡ ವಿಚಾರ ಗೊತ್ತಾದ ಬಳಿಕ ಶಾಸಕರು, ಬೆಂಬಲಿಗರಿಗೆ ಶಿಷ್ಟಾಚಾರದ ಬಗ್ಗೆ ಗೊತ್ತಿರಲಿಲ್ಲ. ಬೆಂಬಲಿಗರು ತಿಳಿಯದೇ ತಪ್ಪು ಮಾಡಿದ್ದಾರೆ. ಬೆಂಬಲಿಗರಿಗೆ ತಿಳಿ ಹೇಳುತ್ತೇನೆ. ಇಲ್ಲಿ ಸಮಸ್ಯೆಗಳು ಇದ್ದರೆ ಹೇಳಿ ಎಂದು ಮನವಿ ಮಾಡಿ ತೆರಳಿದರು.