ನವದೆಹಲಿ: ಎಐಎಂಐಎಂ ಪಕ್ಷ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಉಗ್ರಸಂಘಟನೆ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ ಎಂದು ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್ ರಿಜ್ವಿ ಹೇಳಿದ್ದಾರೆ.
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ತೃಪ್ತಿ ತಂದಿಲ್ಲ ಎಂಬ ಓವೈಸಿ ಹೇಳಿಕೆ ವಿರುದ್ಧ ಕಿಡಿಕಾರಿದ ವಾಸಿಮ್ ರಿಜ್ವಿ, ಭಯೋತ್ಪಾದನೆಯನ್ನು ಹರಡಲು ಬಾಗ್ದಾದಿ ಸೈನ್ಯ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಳಸಿದರೆ, ಓವೈಸಿ ತನ್ನ ನಾಲಿಗೆ ಉಪಯೋಗಿಸುತ್ತಿದ್ದಾರೆ. ಓವೈಸಿ ಮುಸ್ಲಿಮರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಐಸಿಸ್ ನಾಯಕ ಬಾಗ್ದಾದಿನನ್ನ ನಾಯಿಯಂತೆ ಕೊಂದಿದ್ದೇವೆ: ಟ್ರಂಪ್
Advertisement
Advertisement
ಅಯೋಧ್ಯೆ ಪ್ರಕರಣದ ತೀರ್ಪಿನ ನಂತರ ಪ್ರತಿಕ್ರಿಯಿಸಿದ್ದ ಓವೈಸಿ, ಸುಪ್ರೀಂ ಕೋರ್ಟ್ ಸರ್ವೋಚ್ಚ. ಆದರೆ ದೋಷಾತೀತ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮರ ಪರ ವಾದಮಂಡಿಸಿದ ವಕೀಲರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದು ತಿಳಿಸಿದೆ. ನನ್ನ ಅಭಿಪ್ರಾಯವು ಕೂಡ ಇದೆ ಆಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಬಾಗ್ದಾದಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಶ್ವಾನದ ವಿಶೇಷತೆ ಏನು? ಕಾರ್ಯಾಚರಣೆಗೆ ಈ ನಾಯಿಯನ್ನೇ ಬಳಸುತ್ತಾರೆ ಯಾಕೆ?
Advertisement
ಬಾಬ್ರಿ ಮಸೀದಿಯನ್ನು 1992ರಲ್ಲಿ ಹಾಳು ಮಾಡಿದರು. ಅದಾದ ಬಳಿಕ ಆ ಜಾಗದ ಮೇಲೆ ನಿಷೇಧ ಹೇರಿ, ಕೋರ್ಟ್ ತನ್ನ ಸುಪರ್ದಿಗೆ ಪಡೆಯಿತು. ಆದರೆ ಈಗ ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ 5 ಎಕರೆ ಜಮೀನನ್ನು ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಭಾರತದ ಸಂವಿಧಾನ ಎಲ್ಲರಿಗೂ ಒಂದೇ. ನಮಗೂ ಸಂವಿಧಾನದ ಮೇಲೆ ಅಪಾರ ಭರವಸೆ ಇದೆ. ನಮಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದರು. ಈ ಹೇಳಿಕೆಯ ನಂತರ ನವೆಂಬರ್ 11ರಂದು ಓವೈಸಿ ವಿರುದ್ಧವೂ ದೂರು ದಾಖಲಾಗಿದೆ.
Advertisement