ಬೆಂಗಳೂರು: ವಿಶೇಷವಾಗಿ ಜಗದೀಶ್ ಶೆಟ್ಟರ್(Jagadish Shettar) ಮತ್ತು ಪ್ರಹ್ಲಾದ್ ಜೋಶಿ(Pralhad Joshi) ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಸೋಮಣ್ಣ (V. Somanna) ಹಾಡಿ ಹೊಗಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ. ಶೆಟ್ಟರ್ ಅವರು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು. ತೀರ್ಮಾನ ಮಾಡುವಾಗ ಒಂದೊಂದು ಸಾರಿ ಎಷ್ಟರ ಮಟ್ಟಿಗೆ ಅನ್ನೋದಕ್ಕಿಂತ, ಅವರ ಹಿರಿಯ ಅನುಭವ ಇಟ್ಟುಕೊಂಡು ಅಮಿತ್ ಶಾ, ನಡ್ಡಾಜೀ ಅವರು ಪ್ರಧಾನಿಗಳ ಸಲಹೆ ಮೇರೆಗೆ ಈ ಕೆಲಸ ಮಾಡಿದ್ದಾರೆ. ಇದನ್ನ ನಾನು ಸ್ವಾಗತ ಮಾಡುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಾಗ ರಾಜ್ಯಾದ್ಯಂತ ಓಡಾಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಆಗಲಿ ಅಂತಾ ದೇಶದ ಅಭಿವೃದ್ಧಿ ನೋಡಿಕೊಂಡು ಮತ್ತೆ ಬಿಜೆಪಿಗೆ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್
Advertisement
Advertisement
ಇದೇ ವೇಳೆ ಚುನಾವಣೆಗೆ ನಿಲ್ಲುವ ಕುರಿತ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೈಕಮಾಂಡ್ ತೀರ್ಮಾನ ಮಾಡಿ ತುಮಕೂರಿಗೆ ಹೋಗಿ ನಿಂತುಕೊಳ್ಳಪ್ಪ ಅಂದರೆ ಅವರ ತೀರ್ಮಾನಕ್ಕೆ ಬದ್ಧ ಆಗಿರುತ್ತೀನಿ ಎಂದು ಹೇಳಿದ್ದಾರೆ. ಬಿಜೆಪಿಗೆ ಇನ್ನಷ್ಟು ನಾಯಕರು ಬರುವ ಬಗ್ಗೆ ಗೊತ್ತಿಲ್ಲ ನೋಡಬೇಕು ಎಂದಿದ್ದಾರೆ. ಜೊತೆಗೆ ಅವರ ಪುತ್ರನಿಗೆ ಟಿಕೆಟ್ ಕೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಆ ರೀತಿ ಇಲ್ಲ ಎಂದು ಪುತ್ರನ ಟಿಕೆಟ್ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!
Advertisement