DistrictsHaveriKarnatakaLatestMain Post

ಕುರಿದೊಡ್ಡಿಗೆ ನುಗ್ಗಿ 30 ಕುರಿಗಳನ್ನು ಕದ್ದೊಯ್ದ ಖದೀಮರು – ಕುರಿಗಾಯಿ ಕಣ್ಣೀರು

ಹಾವೇರಿ: ಕುರಿದೊಡ್ಡಿಯಲ್ಲಿ ಕಟ್ಟಿದ್ದ 30 ಕುರಿಗಳನ್ನು ಕಳ್ಳರು ಕದ್ದಿದ್ದು, ಖದೀಮರ ಕೈಚಳಕಕ್ಕೆ ಕುರಿಗಾಯಿ ಕಣ್ಣೀರು ಹಾಕಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ತಾಂಡಾದಲ್ಲಿ ನಡೆದಿದೆ.

ಭೀಮಪ್ಪ ಲಮಾಣಿ ಕುರಿಗಳನ್ನು ಕಳೆದುಕೊಂಡವರಾಗಿದ್ದಾರೆ. ರಾತ್ರೋರಾತ್ರಿ ಕುರಿದೊಡ್ಡಿಗೆ ನುಗ್ಗಿದ 5 ಜನರ ಕಳ್ಳರ ಗ್ಯಾಂಗ್ ಮಲಗಿದ್ದ ಭೀಮಪ್ಪ ಲಮಾಣಿ ಅವರಿಗೆ ಹೆದರಿಸಿ ಮೂವತ್ತು ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

ವಿಕಲಚೇತನನಾಗಿದ್ದರು ಕುರಿಗಳನ್ನು ಸಾಕಿಕೊಂಡು ಭೀಮಪ್ಪ ಜೀವನ ಸಾಗಿಸುತ್ತಿದ್ದರು. ಆದರೆ ಖದೀಮರು 30 ಕುರಿಗಳನ್ನು ಬೊಲೆರೋ ವಾಹನದಲ್ಲಿ ಹಾಕಿಕೊಂಡು ಹೋಗಿದ್ದು, ಈ ಕೃತ್ಯದಿಂದಾಗಿ ಕಂಗಲಾಗಿ ಕುರಿಗಾಯಿ ಕಣ್ಣೀರು ಹಾಕಿದ್ದಾರೆ. ಈ ಘಟನೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

Leave a Reply

Your email address will not be published.

Back to top button