ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

Public TV
1 Min Read
Ramanagara Forest Fire

– ಕೃತ್ಯವೆಸಗಿದ ಕುರಿಗಾಹಿ ಅರೆಸ್ಟ್

ರಾಮನಗರ: ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ (Fire) ಹಾಕಿದ ಪರಿಣಾಮ ಸುಮಾರು 30 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಕನಕಪುರ (Kanakapura) ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.

ಅರಣ್ಯಕ್ಕೆ ಬೆಂಕಿಹಾಕಿದ ಹೂಳ್ಯ ಗ್ರಾಮದ ರಾಜಪ್ಪ (42) ಎಂಬಾತನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ರಾಜಪ್ಪ ಮೇಕೆಗಳ ಮೇಯಿಸಲು ಹೋಗಿದ್ದ. ಅರಣ್ಯದಲ್ಲಿರುವ ಒಣ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಅರಣ್ಯಕ್ಕೆ ಬೆಂಕಿಹಚ್ಚಿದ್ದ. ಇದನ್ನೂ ಓದಿ: ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

Ramanagara Forest Fire Arrest

ಅರಣ್ಯಕ್ಕೆ ಬೆಂಕಿಬಿದ್ದ ಹಿನ್ನೆಲೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಬಳಿಕ ಬೆಂಕಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಕಿನಂದಿಸುವಷ್ಟರಲ್ಲಿ ಸುಮಾರು 30 ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಈ ವೇಳೆ ಅಕ್ರಮವಾಗಿ ವನ್ಯಜೀವಿ ವಲಯಕ್ಕೆ ಎಂಟ್ರಿಯಾಗಿದ್ದ ರಾಜಪ್ಪನನ್ನ ಹಿಡಿದು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬೆಂಕಿಹಾಕಿದ್ದನ್ನ ರಾಜಪ್ಪ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 300 ಮಕ್ಕಳ ಮೇಲೆ ವೈದ್ಯನಿಂದ ರೇಪ್ – ನಾನು `ಶಿಶುಕಾಮಿ’ ಎಂದು ತಪ್ಪೊಪ್ಪಿಕೊಂಡ ಆರೋಪಿ

ಅರಣ್ಯಕ್ಕೆ ಬೆಂಕಿಹಾಕಿದ ಹಿನ್ನೆಲೆ ಕೆಲ ವನ್ಯಜೀವಿಗಳೂ ಸಹ ಸಾವನ್ನಪ್ಪಿದ್ದು, ಬೃಹತ್ ಗಾತ್ರದ ಹೆಬ್ಬಾವು ಸಹ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ಹಗರಣ – ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

Share This Article