ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಮೇಯರ್ (MCD Mayor) ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಿದೆ. ಶೆಲ್ಲಿ ಒಬೆರಾಯ್ (Shelly Oberoi) ಅವರನ್ನ ಮೇಯರ್ ಅಭ್ಯರ್ಥಿಯಾಗಿ ಹಾಗೂ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನ ಉಪಮೇಯರ್ ಅಭ್ಯರ್ಥಿಗಳಾಗಿ ಆಪ್ ಘೋಷಣೆ ಮಾಡಿದೆ.
Advertisement
ದೆಹಲಿ ವಿಶ್ವವಿದ್ಯಾನಿಲಯದ (Delhi University) ನಿವೃತ್ತ ಪ್ರಧ್ಯಾಪಕಿ ಆಗಿರುವ ಶೆಲ್ಲಿ ಒಬೆರಾಯ್ ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ (BJP) ಭದ್ರಕೋಟೆಯನ್ನ ಭೇದಿಸಿ ಕೌನ್ಸಿಲರ್ ಆಗಿದ್ದಾರೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ
Advertisement
Advertisement
ಇನ್ನೂ ದೆಹಲಿಯಲ್ಲಿ 6 ಬಾರಿ ಶಾಸಕರಾಗಿದ್ದ ಶೋಯೆಬ್ ಇಕ್ಬಾಲ್ ಅವರ ಪುತ್ರ ಆಲೆ ಮೊಹಮ್ಮದ್ ಇಕ್ಬಾಲ್ 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನಿಗೆ ಕಾರು ನೀಡದೇ ಕಿರಿಕ್- ನಲಪಾಡ್ ವಿರುದ್ಧ ದೂರು
Advertisement
ಇದೇ ತಿಂಗಳ ಡಿಸೆಂಬರ್ 8 ರಂದು ನಡೆದ ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ (MCD Election) ಆಮ್ ಆದ್ಮಿ ಪಕ್ಷ ಗೆದ್ದು, ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು. ಓಟ್ಟು 250 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನ ಗೆದ್ದರೆ, ಎಎಪಿ 134 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿತು. ಇದನ್ನೂ ಓದಿ: ಮಂಡ್ಯದಲ್ಲಿ ಜಾಮಿಯಾ ಮಸೀದಿ ವಿವಾದ ಕೆಣಕಿ ಬಿಜೆಪಿ ರಾಜಕೀಯ -ಹೆಚ್‌ಡಿಕೆ