ನವದೆಹಲಿ: ಶನಿವಾರ ವಿಧಿವಶರಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಇಂದು ಸಂಜೆ ಪಂಚಭೂತಗಳಲ್ಲಿ ಲೀನವಾದರು.
ಶೀಲಾ ದೀಕ್ಷಿತ್ ಅವರ ಅಂತಿಮ ವಿಧಿವಿಧಾನಗಳನ್ನು ಇಂದು ಯಮುನಾ ನದಿ ದಡದ ನಿಗಮ್ ಬೋಧ ಘಾಟ್‍ನಲ್ಲಿ ನೆರವೇರಿಸಲಾಯ್ತು. ಅಂತಿಮ ವಿಧಿವಿಧಾನಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ಪಶ್ಚಿಮ ದೆಹಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇರಿಸಿ ಗಣ್ಯರಿಂದ ನಮನ ಸಲ್ಲಿಸಲಾಯ್ತು.
Advertisement
Delhi: Madhya Pradesh Chief Minister Kamal Nath pays tribute to former Delhi CM and Senior Congress leader #SheilaDixit, at Congress Headquarter pic.twitter.com/NVquZ5LqZm
— ANI (@ANI) July 21, 2019
Advertisement
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶೀಲಾ ದೀಕ್ಷಿತ್ ಶನಿವಾರ ಮಧ್ಯಾಹ್ನ ಸುಮಾರು 3.55ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದರು. ಬಳಿಕ ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷಬೇಧ ಮರೆತು ಎಲ್ಲರೂ ಆಗಮಿಸಿ ಶೀಲಾ ದೀಕ್ಷಿತ್ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದರು.
Advertisement
Sonia Gandhi and Priyanka Gandhi Vadra pay tribute to former Delhi CM and Senior Congress leader #SheilaDixit, at Congress Headquarter pic.twitter.com/lBbBa4SJnD
— ANI (@ANI) July 21, 2019
Advertisement
ಇಂದು ಸಹ ಸುಷ್ಮಾ ಸ್ವರಾಜ್, ಎಲ್.ಕೆ.ಅಡ್ವಾನಿ, ಓಮರ್ ಅಬ್ದುಲ್ಲಾ, ರಾಜನಾಥ್ ಸಿಂಗ್, ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶೀಲಾ ದೀಕ್ಷಿತ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ನನಗೆ ಬೆಂಬಲವಾಗಿ ಶೀಲಾ ದೀಕ್ಷಿತ್ ಇದ್ದರು. ಗೆಳತಿ, ಹಿರಿಯ ಸಹೋದರಿಯ ಸ್ಥಾನದಲ್ಲಿ ಶೀಲಾ ದೀಕ್ಷಿತ್ ನನ್ನ ಬದುಕಿನ ಒಂದು ಭಾಗವಾಗಿದ್ದರು. ನಾನು ಯಾವತ್ತೂ ಶೀಲಾ ದೀಕ್ಷಿತ್ ಅವರನ್ನು ಮರೆಯಲ್ಲ ಎಂದು ಸೋನಿಯಾ ಗಾಂಧಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ್ದರು.
Former Delhi Chief Minister and Congress leader Sheila Dikshit was cremated with state honours, today. pic.twitter.com/AXvidT6ubO
— ANI (@ANI) July 21, 2019
Delhi: UPA Chairperson Sonia Gandhi, Priyanka Gandhi Vadra & Robert Vadra at Nigambodh Ghat where last rites of former Delhi CM Sheila Dikshit were performed, today. pic.twitter.com/XWlRZHtmBx
— ANI (@ANI) July 21, 2019