ಕೋಲ್ಕತ್ತಾ: ಸಂದೇಶ್‍ಖಾಲಿಯಲ್ಲಿ (Sandeshkhali) ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತೃಣಮೂಲ ಕಾಂಗ್ರೆಸ್‍ನಿಂದ (TMC) ಅಮಾನತಾಗಿರುವ ಆರೋಪಿ ಶೇಖ್ ಷಹಜಹಾನ್‍ನ (Sheikh Shahjahan) ಕೇಂದ್ರೀಯ ತನಿಖಾ ದಳದ (CBI) ಕಸ್ಟಡಿಯನ್ನು ಮತ್ತೆ ನಾಲ್ಕು ದಿನಗಳವರೆಗೆ ನ್ಯಾಯಾಲಯ (Court) ವಿಸ್ತರಿಸಿದೆ.
ಪಶ್ಚಿಮ ಬಂಗಾಳದ (West Bengal) ಬಸಿರ್‍ಹತ್‍ನ ನ್ಯಾಯಾಲಯ ಕೇಂದ್ರೀಯ ಸಂಸ್ಥೆಯ ಅರ್ಜಿಯ ಆಧಾರದ ಮೇಲೆ ಈ ಆದೇಶ ನೀಡಿದೆ. ಕೋಲ್ಕತ್ತಾ ಹೈಕೋರ್ಟ್‍ನ ಆದೇಶದ ಮೇರೆಗೆ ತನಿಖೆಯ ವರ್ಗಾವಣೆಯೊಂದಿಗೆ ಮಾರ್ಚ್ 6 ರಂದು ಸಿಬಿಐ ಶೇಖ್ ಷಹಜಹಾನ್‍ನನ್ನು ಕಸ್ಟಡಿಗೆ ಪಡೆದುಕೊಂಡಿತ್ತು. ಇದೀಗ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಯನ್ನು ವಿಸ್ತರಿಸಿದೆ. ಅಲ್ಲದೇ ಮಾ.14 ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: ಮಸೀದಿ, ಮದರಸಾಗಳಲ್ಲಿ ಎನ್‍ಐಎ ದಾಳಿ ನಡೆಸಿದ್ರೆ ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಪತ್ತೆಯಾಗಬಹುದು: ಶರಣ್ ಪಂಪ್‍ವೆಲ್
Advertisement
Advertisement
ಜ.5 ರಂದು ಪಡಿತರ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಂದೇಶ್‍ಖಾಲಿಯಲ್ಲಿರುವ ಶೇಖ್ ಷಹಜಹಾನ್‍ನ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜನರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಮೇಲೆ, ತಲೆಮರೆಸಿಕೊಂಡ 55 ದಿನಗಳ ಬಳಿಕ ಫೆ.29 ರಂದು ಆತನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಡೀಪ್‍ಫೇಕ್ ವೀಡಿಯೋ ವೈರಲ್