ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ಕೊಟ್ಟ `ಬಿಗ್ ಬಾಸ್’ ಖ್ಯಾತಿಯ ಶೆಹನಾಜ್ ಗಿಲ್

Advertisements

ಬಾಲಿವುಡ್‌ನ ಬಿಗ್ ಶೋ ಬಿಗ್ ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಈದ್ ಔತಣ ಕೂಟದಲ್ಲಿ ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡು ಸಖತ್ ಸುದ್ದಿಯಾಗಿದ್ದರು. ಈಗ ನಟಿ ಶೆಹನಾಜ್ ಹಾಟ್ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ.

Advertisements

ಬಿಗ್ ಬಾಸ್ ಸೀಸನ್ 13ರಲ್ಲಿ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಶೆಹನಾಜ್, ಬಿಗ್ ಬಾಸ್ ಮನೆಯಲ್ಲಿ ಪರಿಚಿತರಾದ ಸಿದ್ಧಾರ್ಥ್ ಶುಕ್ಲಾ ಜತೆ ಪ್ರೀತಿಯಲ್ಲಿದ್ದರು. ಸಿದ್ಧಾರ್ಥ್ ಅಗಲಿಕೆಯ ನಂತರ ಚಿತ್ರರಂಗದಿಂದ ದೂರಾಗಿದ್ದ ಶೆಹನಾಜ್, ಆ ನೋವಿನಿಂದ ಹೊರ ಬಂದು ಮತ್ತೆ ಆಕ್ಟೀವ್ ಆಗಿದ್ದಾರೆ. ಆಲ್ಬಂ ಸಾಂಗ್, ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ. ಈಗ ಪೂಲ್‌ನಲ್ಲಿ ನಿಂತು ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಬಾರಿ ವೈರಲ್ ಆಗುತ್ತಿದೆ. ಇದನ್ನೂ ಓದಿ: `ಕಿರಿಕ್ ಪಾರ್ಟಿ’ 2 ಮಾಡೋಕೆ ರೆಡಿಯಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Advertisements

ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟನೆಯ `ಕಭಿ ಈದ್ ಕಭಿ ದಿವಾಲಿ’ ಚಿತ್ರದಲ್ಲಿ ಶೆಹನಾಜ್ ಪ್ರಮುಖ ಮಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಕಥೆಗಳು ಈ ನಟಿಯನ್ನ ಅರಸಿ ಬರುತ್ತಿದ್ದು, ಒಂದೊಳ್ಳೆ ಪ್ರಾಜೆಕ್ಟ್ ಮೂಲಕ ಕಮಾಲ್ ಮಾಡಲಿದ್ದಾರೆ.

Advertisements
Advertisements
Exit mobile version