InternationalLatestMain Post

ಪಾಕ್ ಪ್ರಧಾನಿಯ ಆಡಿಯೋ ಲೀಕ್ – 26 ಕೋಟಿಗೆ ಡಾರ್ಕ್ ವೆಬ್‌ನಲ್ಲಿ ಹರಾಜು

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ (Pakistan PM) ಶೆಹಬಾಜ್ ಷರಿಫ್ (Shehbaz Sharif) ಅವರ ಸುಮಾರು 115 ಗಂಟೆಗಳ ಸರ್ಕಾರಿ ಚರ್ಚೆಯ ಆಡಿಯೋ ಲೀಕ್ (Audio Leak) ಆಗಿದ್ದು, ಅದನ್ನು ಡಾರ್ಕ್ ವೆಬ್‌ನಲ್ಲಿ (Dark Web) 3.5 ಮಿಲಿಯನ್ ಡಾಲರ್ (ಸುಮಾರು 29 ಕೋಟಿ ರೂ.ಗೆ) ಹರಾಜು ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿಯನ್ನು ಪಿಟಿಐ ನಾಯಕ ಫವಾದ್ ಚೌಧರಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಪ್ರಧಾನ ಮಂತ್ರಿಯವರ ಕಚೇರಿಗೆ ಭದ್ರತೆಯೇ ಇಲ್ಲ. ಇದೀಗ ಸೋರಿಕೆಯಾಗಿರುವ ಆಡಿಯೊ ಡಾರ್ಕ್ ವೆಬ್‌ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದೆ. ಇದು ಭದ್ರತಾ ಏಜೆನ್ಸಿಗಳ ವೈಫಲ್ಯ ಎಂದು ಆರೋಪಿಸಿದ್ದಾರೆ.

ಸೋರಿಕೆಯಾದ ಆಡಿಯೋದಲ್ಲಿ, ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಉಪಾಧ್ಯಕ್ಷ ಮರ್ಯಮ್, ರಕ್ಷಣಾ ಸಚಿವ ಖವಾಜಾ ಆಸಿಫ್, ಕಾನೂನು ಸಚಿವ ಅಜಮ್ ತರಾರ್, ಆಂತರಿಕ ಸಚಿವ ರಾಣಾ ಸನಾವುಲ್ಲಾ, ಮಾಜಿ ಎನ್‌ಎ ಸ್ಪೀಕರ್ ಅಯಾಜ್ ಸಾದಿಕ್ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸಂಭಾಷಣೆಗಳು ಕೇಳಿಬಂದಿದೆ. ಇದನ್ನೂ ಓದಿ: ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

Shehbaz Sharif

ಆಡಿಯೋ ಸೋರಿಕೆಯ ಮಾಹಿತಿಯನ್ನು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಭವನದ ಭದ್ರತೆಯನ್ನು ಉಲ್ಲಂಘಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಿಂದ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

Live Tv

Leave a Reply

Your email address will not be published. Required fields are marked *

Back to top button