ಇಸ್ಲಾಮಾಬಾದ್: ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹೊತ್ತಲ್ಲೇ ಪಾಕಿಸ್ತಾನದ ಪ್ರಧಾನಿಯಾಗಿ (Pakistan PM) 2ನೇ ಅವಧಿಗೆ ಶೆಹಬಾಜ್ ಷರೀಫ್ (Shehbaz Sharif) ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು ನಡೆದ ವಿವಾದಾತ್ಮಕ ಚುನಾವಣೆಯ ನಂತರ ಪಾಕಿಸ್ತಾನದ ಶಾಸಕರು ಶೆಹಬಾಜ್ ಷರೀಫ್ ಅವರನ್ನು ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು
Advertisement
Advertisement
ಭಾನುವಾರ ಸಂಸತ್ತಿನ ಕೆಳಮನೆ ಎಂದು ಕರೆಯಲ್ಪಡುವ ರಾಷ್ಟ್ರೀಯ ಅಸೆಂಬ್ಲಿಯು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲು ಸಭೆ ಸೇರಿತು. ಈ ವೇಳೆ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.
Advertisement
ಶೆಹಬಾಜ್ ಷರೀಫ್ ಅವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ ಎಂದು ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಅಯಾಜ್ ಸಾದಿಕ್ ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್ ಕೋಡ್, ಟೈಮಿಂಗ್ಸ್ ವಿವರ ಇಲ್ಲಿದೆ
Advertisement
336 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶೆಹಬಾಜ್ 201 ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಒಮರ್ ಅಯೂಬ್ ಖಾನ್ ಅವರು 92 ಮತಗಳನ್ನು ಪಡೆದರು. ವಿಜೇತರಿಗೆ ಕನಿಷ್ಠ 169 ಮತಗಳು ಬೇಕಾಗಿದ್ದವು.
72 ವಯಸ್ಸಿನ ಷರೀಫ್ ಕಳೆದ ವರ್ಷ ಆಗಸ್ಟ್ ವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 3 ಬಾರಿ ಪಾಕ್ ಪ್ರಧಾನಿಯಾಗಿರುವ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್. ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್ಎನ್) ಪಕ್ಷವನ್ನು ಸ್ಥಾಪಿಸಿದರು. ಈ ಪಕ್ಷವು ಸರ್ಕಾರ ರಚಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಶೆಹಬಾಜ್ ಪ್ರಸ್ತುತ ಪಿಎಂಎಲ್ಎನ್ ಅಧ್ಯಕ್ಷರೂ ಆಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ RSS ಮುಖಂಡನ ಹತ್ಯೆ; ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದಕ್ಷಿಣ ಆಫ್ರಿಕಾದಲ್ಲಿ ಅರೆಸ್ಟ್