ಬೆಳಗಾವಿ: ತೋಟದ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನೇ ಅತ್ಯಾಚಾರ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement
ತೋಟದಲ್ಲಿ ಕೆಲಸಕಿದ್ದ ನನ್ನ ಮೇಲೆ ಜಮೀನು ಮಾಲೀಕ ಅತ್ಯಾಚಾರ ಮಾಡಿದ್ದಾನೆ ಎಂದು ಗೋಕಾಕ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಸೆಪ್ಟೆಂಬರ್ 17ರ ತಡರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿಯಿಂದಲೇ ಟೆಕ್ಕಿ ಕಿಡ್ನಾಪ್- 5 ಕೋಟಿ ಡೀಲ್
Advertisement
Advertisement
ಸಂತ್ರಸ್ತೆ ತನ್ನ ಪತಿ ಹಾಗೂ ಕುಟುಂಬದ ಜೊತೆ ಜಮೀನು ಮಾಲೀಕನ ಮನೆಯ ಎದುರು ಶೆಡ್ ಹಾಕಿಕೊಂಡು ವಾಸವಿದ್ದರು. ಆತನ ತೋಟದಲ್ಲೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಹಿಳೆಯ ಪತಿ ಮನೆಯಿಂದ ಹೊರ ಹೋದಾಗ ಆರೋಪಿ ಜಮೀನು ಮಾಲೀಕ ಈ ಕೃತ್ಯ ಎಸಗಿದ್ದಾನೆ. ಅಲ್ಲದೆ ಕಾವಲಿಗೆ ತನ್ನ ಸಹಚರನನ್ನು ಶೆಡ್ ಬಳಿ ನಿಲ್ಲಿಸಿದ್ದು ತಡೆಯಲು ಬಂದ 5 ವರ್ಷದ ಮಗನನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ
Advertisement
ಈ ವಿಷಯವನ್ನು ಯಾರಿಗೂ ಹೇಳಬಾರದು. ಹೇಳಿದರೆ ಕೊಲೆ ಮಾಡೋದಾಗಿಯೂ ಆರೋಪಿ ಬೆದರಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ. ಆರೋಪದ ಮಾಹಿತಿ ಪಡೆದ ಪೊಲೀಸರು, ಜಮೀನು ಮಾಲೀಕ ಹಾಗೂ ಆತನ ಸಹಚರನನ್ನು ಬಂಧಿಸಿದ್ದಾರೆ.
ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.