ಮುಂಬೈ: ಕಾಣೆಯಾಗಿದ್ದಾರೆ ಎನ್ನುವ 2013ರ ಡಿಜಿಟಲ್ ಪೋಸ್ಟರ್‌ನ ನಕಲು ಪ್ರತಿಯೊಂದು 9 ವರ್ಷಗಳ ಹಿಂದೆ ಕಿಡ್ನ್ಯಾಪ್ ಆಗಿದ್ದ ಅಪ್ರಾಪ್ತೆ ಮತ್ತೆ ತನ್ನ ಕುಟುಂಬದೊಂದಿಗೆ ಸೇರಲು ಸಹಾಯ ಮಾಡಿದೆ.
2013ರಲ್ಲಿ ಪ್ರಕಟಿಸಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಸಹಾಯದಿಂದ ತನ್ನವರನ್ನು ಸಂಪರ್ಕಿಸಿದ ಬಾಲಕಿ 9 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾಳೆ.
ಮುಂಬೈನ ಅಂಧೇರಿಯಲ್ಲಿ ಪೋಷಕರೊಂದಿಗೆ ವಾಸವಿದ್ದ 7 ವರ್ಷದ ಬಾಲಕಿ ಪೂಜಾ 2013ರ ಜನವರಿ 22 ರಂದು ತನ್ನ ಸಹೋದರನೊಂದಿಗೆ ಶಾಲೆಗೆ ಹೋಗಿದ್ದಳು. ಈ ವೇಳೆ ಹೆನ್ರಿ ಜೋಸೆಫ್ ಡಿಸೋಜಾ ಹೆಸರಿನ ವ್ಯಕ್ತಿಯೊಬ್ಬ ತನಗೆ ಐಸ್‌ಕ್ರೀಂ ಕೊಡಿಸೋದಾಗಿ ಆಕೆಯನ್ನು ಅಪಹರಿಸಿದ್ದನು. ಇದೀಗ ಬಂಧನಕ್ಕೊಳಗಾಗಿರುವ ಹೆನ್ರಿ ತನಗೆ ಮಕ್ಕಳಾಗದಿರುವ ಕಾರಣ ಪೂಜಾಳನ್ನ ಅಪಹರಿಸಿದ್ದೆ ಎಂಬುದಾಗಿ ಕೇಳಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ – 5 ದಿನ ಇಂಟರ್‌ನೆಟ್ ಸ್ಥಗಿತ
ಪೂಜಾ ಯಾರಿಂದಲೂ ಗುರುತಿಸಲ್ಪಡುವುದಿಲ್ಲ ಎಂದು ಹೇಳಿ ಹೆನ್ರಿ ಡಿಸೋಜಾ ಆಕೆಯನ್ನು ಕರ್ನಾಟಕದಲ್ಲಿನ ಹಾಸ್ಟೆಲ್‌ಗೆ ಕಳುಹಿಸಿದ್ದನು. ಅಲ್ಲದೆ ಆನಿ ಡಿಸೋಜಾ ಎಂದು ಹೆಸರನ್ನೂ ಬದಲಾಯಿಸಿದ್ದನು. ಹೆನ್ರಿ ದಂಪತಿಗೆ ಸ್ವಂತ ಮಗುವಾದಾಗ ಆಕೆಯನ್ನು ಹಾಸ್ಟೆಲ್‌ನಿಂದ ವಾಪಸ್ ತನ್ನ ಮನೆಗೆ ಕರೆತಂದಿದ್ದನು. ಅಂದಿನಿಂದ ಮನೆಗೆಲಸ ಮಾಡಿಸುತ್ತಾ ಪೂಜಾಳನ್ನು ಚೆನ್ನಾಗಿ ನೋಡಿಕೊಳ್ಳುವುದನ್ನೇ ನಿಲ್ಲಿಸಿದ್ದನು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ
ಸದ್ಯ ಪೂಜಾ 16 ವರ್ಷದ ಬಾಲಕಿಯಾಗಿದ್ದಾಳೆ. ಆದರೆ ಕುಟುಂಬದ ಸದಸ್ಯರ ಬಗ್ಗೆ ಹೆಚ್ಚು ನೆನಪಿರಲಿಲ್ಲ. ಹಾಗಾಗಿ ಪೋಷಕರಿಂದ ದೂರವೇ ಉಳಿದ್ದರು. ಆದರೆ ಹೆನ್ರಿ ಕುಡಿದ ಅಮಲಿನಲ್ಲಿ ಈಕೆ ತನ್ನ ಮಗಳಲ್ಲ ಎಂದು ಹೇಳಿದ ನಂತರ ಪೂಜಾ ತನ್ನ ನಿಜವಾದ ಸುಳಿವಿನ ಬಗ್ಗೆ ಹುಡುಕಾಟ ನಡೆಸಲು ಪ್ರಾರಂಭಿಸಿದಳು. ಪೂಜಾ ಕಾಣೆಯಾದ ನಂತರ ಆಕೆಯ ಸ್ನೇಹಿತರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಪೂಜಾ ಸಹ ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ 2013ರಲ್ಲಿ ಹಾಕಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್‌ವೊಂದು ಸಿಕ್ಕಿದೆ. ಅದರಲ್ಲಿ 5 ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಆದರೆ 4 ಸಂಖ್ಯೆಗಳು ಸೇವೆಯಲ್ಲಿರಲಿಲ್ಲ. ಅದೃಷ್ಟವಶಾತ್ ಉಳಿದ ಒಂದು ಸಂಖ್ಯೆ ಪೂಜಾ ಕುಟುಂಬದ ನೆರೆಯವರಾಗಿದ್ದ ರಫಿಕ್ ಅವರದ್ದಾಗಿತ್ತು. ಪೂಜಾ ರಫಿಕ್‌ಗೆ ಕರೆ ಮಾಡಿ ತನ್ನ ಬಗ್ಗೆ ಹೇಳಿಕೊಂಡಳು. ಆಗ ರಫಿಕ್ ವೀಡಿಯೋ ಕರೆ ಮಾಡಿ ಅವಳೊಂದಿಗೆ ಮಾತನಾಡಿ ಆಕೆಯನ್ನು ಗುರುತಿಸಿದನು. ವೀಡಿಯೋ ಕರೆ ಮಾಡಿ ಪೂಜಾಳ ತಾಯಿಯೊಂದಿಗೂ ಮಾತನಾಡಿಸಿದನು. ಪೂಜಾಳ ತಾಯಿಯೂ ಆಕೆಯನ್ನೂ ಗುರುತಿಸಿದರು.
ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿ ಮಿಲಿಂದ್ ಕುರ್ದರ್ ಅವರ ಸಹಾಯದಿಂದ ಪೂಜಾ ಮತ್ತೆ ತನ್ನ ಮನೆ ಸೇರಿದಳು. ಈ ಅವಧಿಯಲ್ಲಿ ಪೂಜಾ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ಕುಟುಂಬದವರನ್ನು ಭೇಟಿಯಾದ ಕೂಡಲೇ ತನ್ನ ತಾಯಿ ಹಾಗೂ ಸಹೋದರರೊಂದಿಗೆ ಸಂತಸ ಹಂಚಿಕೊಂಡರು.