ಭುವನೇಶ್ವರ: ಒಡಿಶಾದಲ್ಲಿ(Odisha) ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ತಂದು ಸಾಕಿ ಬೆಳೆಸಿದ್ದ ತಾಯಿಯನ್ನೇ ಸಾಕುಮಗಳು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಒಡಿಶಾದಲ್ಲಿ ನಡೆದಿದೆ.
ಗಜಪತಿ ಜಿಲ್ಲೆಯ ಪರಲಖೆಮುಂಡಿಯ(Paralakhemundi) ರಾಜಲಕ್ಷ್ಮೀ(54) ಕೊಲೆಯಾದ ಮಹಿಳೆ. ಮಕ್ಕಳಿಲ್ಲದ ರಾಜಲಕ್ಷ್ಮೀ(Rajalaxmi) ದಂಪತಿ 14 ವರ್ಷಗಳ ಹಿಂದೆ ಭುವನೇಶ್ವರದ ರಸ್ತೆಬದಿಯಲ್ಲಿ ಅನಾಥವಾಗಿ ಬಿದ್ದಿದ್ದ 3 ದಿನದ ಮಗು ಸಿಕ್ಕಿತ್ತು. ಆ ಮಗುವನ್ನು ಕಾನೂನು ಪ್ರಕಾರವಾಗಿಯೇ ಅವರು ದತ್ತು ಪಡೆದಿದ್ದರು. ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿ – ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ
ಸ್ವಲ್ಪ ಸಮಯದ ನಂತರ ರಾಜಲಕ್ಷ್ಮೀ ಪತಿ ನಿಧನರಾದರು. ಅಂದಿನಿಂದ, ರಾಜಲಕ್ಷ್ಮೀ ಒಂಟಿಯಾಗಿಯೇ ಮಗಳನ್ನು ಬೆಳೆಸಿದರು. ಬಳಿಕ ಮಗಳ ವಿದ್ಯಾಭ್ಯಾಸದ ಸಲುವಾಗಿ ಪರಲಖೆಮುಂಡಿಗೆ ಆಗಮಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಆರ್‌ಸಿಬಿ, ಕೆಕೆಆರ್ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?
ರಾಜಲಕ್ಷ್ಮೀ ಅವರು ಮಗಳನ್ನು ಸುಸಂಸ್ಕೃತವಾಗಿ ಬೆಳೆಸಿದ್ದರು. ಕಾಲಕ್ರಮೇಣ ಆಕೆ ದೇವಸ್ಥಾನದ ಅರ್ಚಕ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು(20)ವಿನೊಂದಿಗೆ ಒಡನಾಟ ಬೆಳೆಸಿಕೊಂಡು, ತರಗತಿಗಳಿಗೆ ಬಂಕ್ ಮಾಡಿ ಅವರೊಂದಿಗೆ ಸುತ್ತಾಡುತ್ತಿದ್ದಳು. ಈ ವಿಚಾರ ತಿಳಿದ ರಾಜಲಕ್ಷ್ಮೀ, ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು.
ಕೋಪಗೊಂಡ ಆಕೆ ಈ ವಿಚಾರವನ್ನು ವಾಟ್ಸಾಪ್ ಚಾಟ್ ಮೂಲಕ ಇಬ್ಬರು ಗೆಳೆಯರ ತಿಳಿಸಿದ್ದಳು. ಬಳಿಕ ಆಕೆಯ ಇಬ್ಬರು ಗೆಳೆಯರೊಂದಿಗೆ ಸೇರಿ ತಾಯಿಯ ಕೊಲೆಯ ಪ್ಲ್ಯಾನ್ ಮಾಡಿದ್ದರು. ರಾಜಲಕ್ಷ್ಮೀಯನ್ನು ಕೊಲೆಮಾಡಿ ಆಸ್ತಿಯನ್ನು ಪಡೆಯಬಹುದು ಹಾಗೂ ನೀನು ಸ್ವತಂತ್ರವಾಗಿ ಬಾಳಬಹುದು ಎಂದೆಲ್ಲಾ ಗೆಳೆಯರು ಹುಡುಗಿಯ ತಲೆತುಂಬಿದ್ದರು. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ
ಇದರಿಂದ ಪ್ರಚೋದಿತಲಾದ ಮಗಳು ಏ. 29ರಂದು ಸಂಜೆ, ತಾಯಿ ರಾಜಲಕ್ಷ್ಮೀಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಳು. ರಾಜಲಕ್ಷ್ಮೀ ಪ್ರಜ್ಞಾಹೀನಳಾದ ನಂತರ, ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು, ಬಳಿಕ ಮೂವರು ಸೇರಿ ರಾಜಲಕ್ಷ್ಮೀಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಬಳಿಕ ಆಕೆಯೇ ಕುಟುಂಬಸ್ಥರಿಗೆ ಕರೆ ಮಾಡಿ ತಾಯಿಗೆ ಹುಷಾರಿಲ್ಲ ಎಂದು ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ರಾಜಲಕ್ಷ್ಮೀಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಈ ಹಿಂದೆ ರಾಜಲಕ್ಷ್ಮೀಗೆ ಹೃದಯಾಘಾತವಾಗಿದ್ದರಿಂದ, ಇದನ್ನೇ ದಾಳವಾಡಿ ಬಳಸಿಕೊಂಡು ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ
ರಾಜಲಕ್ಷ್ಮೀಯದ್ದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರಿಗೆ ಹುಡುಗಿ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದೆ. ರಾಜಲಕ್ಷ್ಮೀ ಅವರ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಆಕೆಯ ಮೊಬೈಲ್ ಅನ್ನು ಪರಿಶೀಲಿಸಿದಾಗ ಹುಡುಗಿ ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿರುವುದು ಬಯಲಾಗಿದೆ. ಇದನ್ನೂ ಓದಿ: Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು
ಈ ಚಾಟ್‌ನಲ್ಲಿ ರಾಜಲಕ್ಷ್ಮಿಯನ್ನು ಕೊಂದು ಚಿನ್ನಾಭರಣಗಳು ಮತ್ತು ಹಣವನ್ನು ವಶಪಡಿಸಿಕೊಂಡ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸಿಬಾ ಪ್ರಸಾದ್ ಮೇ 14ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ(Paralakhemundi Police Station) ದೂರು ದಾಖಲಿಸಿದ್ದರು. ಇದನ್ನೂ ಓದಿ: ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?
ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳಾದ ಅಪ್ರಾಪ್ತ ಹುಡುಗಿ, ಗಣೇಶ್ ರಾತ್ ಮತ್ತು ದಿನೇಶ್ ಸಾಹುವನ್ನು ಬಂಧಿಸಿದ್ದಾರೆ. ಹುಡುಗಿಯು ತಾಯಿಯ ಕೆಲವು ಚಿನ್ನದ ಆಭರಣಗಳನ್ನು ಈ ಹಿಂದೆ ಗಣೇಶ್ ರಾತ್‌ಗೆ ಹಸ್ತಾಂತರಿಸಿದ್ದಳು. ಆತ ಚಿನ್ನಾಭರಣಗಳನ್ನು 2.4 ಲಕ್ಷ ರೂ.ಗೆ ಅಡವಿಟ್ಟಿದ್ದ ಎನ್ನಲಾಗಿದೆ. ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.