ನವದೆಹಲಿ: 16 ವರ್ಷದ ಅಪ್ತಾಪ್ತನೊಬ್ಬ ತನ್ನ ಮಾಲಕಿಯನ್ನೇ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗುವ ಮೂಲಕ ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.
ಅನಿತಾ ಕೊಲೆಯಾದ ಮನೆ ಮಾಲಕಿ. ಈ ಘಟನೆ ಬುಧವಾರ ರಾತ್ರಿ ಲಜ್ಪತ್ ನಗರದಲ್ಲಿ ನಡೆದಿದೆ. ಅನಿತಾ ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ಆರೋಪಿ ಅಪ್ರಾಪ್ತ ಬಂದು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಠಾಣೆಗೆ ಬಂದು ವಿಚಾರ ತಿಳಿಸಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಅಳುತ್ತಲೇ ಪೊಲೀಸ್ ಠಾಣೆಗೆ ಬಂದ ಅಪ್ರಾಪ್ತ, ತನ್ನ ಮನೆ ಮಾಲಕಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಕೃತ್ಯದ ಬಗ್ಗೆ ಮರುಕ ಮುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆತ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಬರುವಾಗ ಆತನ ಬಟ್ಟೆ ಹಾಗೂ ಕೈನಲ್ಲಿ ರಕ್ತದ ಕಲೆಯಿತ್ತು ಅಂತ ಸಾಹಿಬಬಾದ್ ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ಹೇಳಿದ್ದಾರೆ.
Advertisement
ಅಪ್ರಾಪ್ತನ ಹೇಳಿಕೆಯಂತೆ ಆತನ ಜೊತೆಗೆ ಪೊಲೀಸರು ಕೊಲೆಯಾದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಅನಿತಾ ಬೆಡ್ ರೂಮ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಒಂದು ಬದಿಯಲ್ಲಿ ಆಕೆಯ ಎರಡೂವರೆ ವರ್ಷದ ಹೆಣ್ಣು ಮಗು ನಿದ್ರಿಸುತ್ತಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಮನೆಯಲ್ಲಿರಲಿಲ್ಲ.
Advertisement
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಹೇಳಿದ್ದಳು. ಆದ್ರೆ ಇದನ್ನು ನಾನು ವಿರೋಧಿಸಿದ್ದೆ. ಆದ್ರೆ ಆಕೆ ನನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸಬೇಕು. ನನ್ನ ಜೊತೆ ಮಲಗದಿದ್ದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ನಿನ್ನ ವಿರುದ್ಧ ಕೇಸ್ ದಾಖಲಿಸುತ್ತೇನೆ ಅಂತ ಹೇಳಿದ್ದಳು. ಹೀಗಾಗಿ ಬುಧವಾರ ರಾತ್ರಿ ಆಕೆ ಒಬ್ಬಳೇ ಮನೆಯಲ್ಲಿದ್ದ ವೇಳೆ ಕೋಣೆಗೆ ಎಳೆದುಕೊಂಡು ಹೋಗಿ ಅಡುಗೆ ಮನೆಯಿಂದ ಚಾಕು ತಂದು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಒಂಪಾಲ್ ಮನೆಯಲ್ಲಿರಲಿಲ್ಲ ಎಂಬುವುದಾಗಿ ವರದಿಯಾಗಿದೆ.
Advertisement
ಒಂಪಾಲ್ ಕುಟುಂಬಕ್ಕೆ ಆರೋಪಿ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದನು. 15 ತಿಂಗಳು ಕೆಲಸವಿಲ್ಲದೇ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಸಂದರ್ಭದಲ್ಲಿ ಈ ಕುಟುಂಬ ಆತನನ್ನು ಕರೆದುಕೊಂಡು ಬಂದು ಕೆಲಸ ಕೊಡಿಸಿದ್ದರು.