ನವದೆಹಲಿ: ಗನ್ ಹಿಡಿದು ಯುವತಿ ಹಾಗೂ ಆಕೆಯ ಬಾಯ್ ಫ್ರೆಂಡ್ ಜೊತೆ ಪುಂಡಾಟ ಮೆರೆದಿದ್ದ ಬಿಎಸ್‍ಪಿ ಮಾಜಿ ಸಂಸದ ರಾಕೇಶ್ ಪಾಂಡೆಯ ಪುತ್ರ ಆಶಿಶ್ ಪಾಂಡೆ ನ್ಯಾಯಾಲಯಕ್ಕೆ ಶರಣನಾಗಿದ್ದಾನೆ.
ನ್ಯಾಯಾಲಯಕ್ಕೆ ಶರಣಾದ ಬಳಿಕ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಆಶಿಶ್ ಪಾಂಡೆ, ಪೊಲೀಸರು ದೇಶದಾದ್ಯಂತ ನನ್ನನ್ನು ಭಯೋತ್ಪಾದಕನಂತೆ ಬಿಂಬಿಸಿದ್ದಾರೆ. ಇದಕ್ಕೆ ಅವರು ಹೊರಡಿಸಿರುವ ನೋಟಿಸ್ ಸಾಕ್ಷಿಯಾಗಿದೆ. ನಿಮಗೆ ಅಷ್ಟು ಅನುಮಾನವಿದ್ದರೆ ಹೋಟಿಲ್ ನ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿ, ಯಾರು ಮಹಿಳೆಯರ ಶೌಚಾಲಯಕ್ಕೆ ಹೋದರು, ಯಾರು ಯಾರನ್ನು ನಿಂದಿಸಿದರು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾನೆ.
Advertisement
I'm being projected like I'm a wanted terrorist & police across the nation is looking for me. Look Out Circular has been issued against me. If you check CCTV footage, you'll find who went to ladies toilet that night & who threatened whom: #AshishPandey pic.twitter.com/Sg1JuMvJsH
— ANI (@ANI) October 18, 2018
Advertisement
ನಾನು ನನ್ನ ರಕ್ಷಣೆಗಾಗಿ ಪಿಸ್ತೂಲನ್ನು ಹೊಂದಿದ್ದೇನೆ. ಅದನ್ನು ಬೆದರಿಸುವುದಕ್ಕೆ ಬಳಕೆ ಮಾಡಿಲ್ಲ ಎಂದು ಹೇಳುವ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ನ್ಯಾಯಾಲಯಕ್ಕೆ ಆಶಿಶ್ ಪಾಂಡೆಯನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
Advertisement
ಸಾರ್ವಜನಿಕ ಪ್ರದೇಶದಲ್ಲಿ ಗನ್ ಹಿಡಿದು ಪುಂಡಾಟ ನಡೆಸಿದ್ದಕ್ಕೆ, ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು. ಪೊಲೀಸರು ಆಶಿಶ್‍ಗೆ ಸಂಬಂಧಪಟ್ಟ ದೆಹಲಿ ಹಾಗೂ ಲಕ್ನೋದ ಸ್ನೇಹಿತರನ್ನು ಸಹ ವಿಚಾರಣೆಗೆ ಒಳಪಡಿಸಿತ್ತು.
Advertisement
Court grants one-day police remand to #AshishPandey. Delhi Police had sought 4 days custodial remand. Ashish Pandey was seen brandishing a gun outside Hyatt Regency on October 14 & surrendered before the police today. (File pic) pic.twitter.com/Lh7D1LyqJT
— ANI (@ANI) October 18, 2018
ಏನಿದು ಘಟನೆ?
ಆಶಿಶ್ ಪಾಂಡೆ ಅಕ್ಟೋಬರ್ 14ರ ಭಾನುವಾರ ರಾತ್ರಿ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಯುವ ಜೋಡಿ ಹಾಗೂ ಆಶಿಶ್ ಪಾಂಡೆ ನಡುವೆ ಜಗಳ ಏರ್ಪಟಿತ್ತು. ಈ ವೇಳೆ ಸಿಟ್ಟಿಗೆದ್ದ ಆಶಿಶ್ ತಮ್ಮ ಬಳಿಯಿದ್ದ ಗನ್ ತೆಗೆದು ಯುವತಿ ಹಾಗೂ ಆತನ ಪ್ರಿಯಕರನಿಗೆ ಬೆದರಿಸಿದ್ದರು. ಆಶಿಶ್ ಗನ್ ತೆಗೆದು ರಂಪಾಟ ನಡೆಸುತ್ತಿದ್ದನ್ನು ಕಂಡ ಹೋಟೆಲ್‍ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ಕಳುಹಿಸಿದ್ದರು.
ಹೋಟೆಲ್ ಸಿಬ್ಬಂದಿ ತಕ್ಷಣ ಎಚ್ಚತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿತ್ತು. ಅಲ್ಲದೇ ಆಶಿಶ್ ಪಾಂಡೆ ಗನ್ ಹಿಡಿದು ಪುಂಡಾಟ ಮೆರೆದ 1 ನಿಮಿಷಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ದೆಹಲಿ ಪೊಲೀಸರು, ಸಾರ್ವಜನಿಕ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತೋರಿ ದರ್ಪ ಮೆರೆದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
https://twitter.com/rajshekharTOI/status/1052068745319931904
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv