Connect with us

International

9ನೇ ಮಹಡಿಯಿಂದ ಬಿದ್ದ ಮಹಿಳೆಯನ್ನು ಜನ ಕ್ಯಾಚ್ ಹಿಡಿದ್ರು! ವಿಡಿಯೋ ನೋಡಿ

Published

on

ಬೀಜಿಂಗ್: 9ನೇ ಮಹಡಿಯಿಂದ 2ನೇ ಮಹಡಿಗೆ ಬಿದ್ದು ಅಲ್ಲಿಂದ ಕೆಳಗೆ ಬಿದ್ದರೂ ಸಣ್ಣಪುಟ್ಟ ಗಾಯಗಳಾಗಿ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.

ಡಿಸೆಂಬರ್ 7 ರಂದು ಉತ್ತರ ಚೀನಾ ಯಾನ್‍ಶವ್ ನ ಅತಿಥಿಗಳಿರುವ ಹೋಟೆಲ್ ನ 9ನೇ ಮಹಡಿಯಿಂದ ಮಹಿಳೆ ಬಿದ್ದಿದ್ದಾರೆ. ನಂತರ ಮಹಿಳೆ 9ನೇ ಮಹಡಿಯಿಂದ ನೇರವಾಗಿ 2ನೇ ಮಹಡಿಗೆ ಬಿದ್ದಿದ್ದಾರೆ. ನಂತರ ಮಹಿಳೆ ಅಲ್ಲಿಂದ ತೆವಳಿಕೊಂಡು ಬಂದು ಮತ್ತೊಮ್ಮೆ ಬಿದ್ದಿದ್ದಾರೆ.

https://www.youtube.com/watch?time_continue=18&v=B6u76IWBTW4

ಮಹಿಳೆ ಕಟ್ಟಡದಿಂದ ಬೀಳುವುದನ್ನು ನೋಡಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಹಿಳೆ ಕಟ್ಟಡದಿಂದ ಬೀಳುವುದನ್ನು ನೋಡಿದ ಜನರು ಆಕೆ ಬೀಳುವ ವೇಳೆ ಹಿಡಿದು ರಕ್ಷಿಸಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಮಹಿಳೆ ಕಟ್ಟಡದಿಂದ ಜಿಗಿದಿದ್ದು ಯಾಕೆ ಎನ್ನುವುದಕ್ಕೆ ಕಾರಣ ತಿಳಿದು ಬಂದಿಲ್ಲ ಹಾಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

 

Click to comment

Leave a Reply

Your email address will not be published. Required fields are marked *