ಮಂಡ್ಯ ಬಸ್ ದುರಂತ ಮಾಸುವ ಮುನ್ನವೇ ಕರುನಾಡಿನ ಜನತೆಗೆ ಶಾಕಿಂಗ್ ಸುದ್ದಿ

Public TV
1 Min Read
mnd bus vc nale

ಬೆಂಗಳೂರು: ಮಂಡ್ಯದ ಬಸ್ ದುರಂತದಲ್ಲಿ ಕಣ್ಣೆದುರೇ 30 ಮಂದಿ ಸಾವನ್ನಪ್ಪಿದ್ದ ಘೋರ ದುರಂತ ಮರೆಯಾಗುವ ಮುನ್ನವೇ ಕರುನಾಡು ಬೆಚ್ಚಿ ಬೀಳುವ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ರಾಜ್ಯದಲ್ಲಿ ಬರೋಬ್ಬರಿ 21 ಸಾವಿರ ಬಸ್‍ಗಳು ಹದಿನೈದು ವರ್ಷ ಹಳೆಯದಾಗಿದ್ದರೂ ರಸ್ತೆಯಲ್ಲಿ ಯಮನಂತೆ ಓಡಾಡುತ್ತಿದೆ. ಮಂಡ್ಯ ದುರಂತದ ಬಳಿಕ ಸಿಎಂ ಆದೇಶದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಫೀಲ್ಡ್ ಗಿಳಿದಾಗ ಈ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತದ ಕರಾಳ ನೆನಪು- ವಿದ್ಯಾರ್ಥಿಗಳನ್ನು ನೆನೆದು ಕಣ್ಣೀರಿಟ್ಟ ಸಹಪಾಠಿಗಳು

deadly bus 2

ಕರ್ನಾಟಕದಲ್ಲಿ ಸಾವಿರಾರು ಡಕೋಟಾ ಎಕ್ಸ್ ಪ್ರೆಸ್ ಡೆಡ್ಲಿ ಬಸ್‍ಗಳು ಇನ್ನೂ ಬಲಿಗಾಗಿ ಕಾಯುತ್ತಿರುವುದು ಒಂದಡೆಯಾದರೆ, ಬರೋಬ್ಬರಿ ನಾಲ್ಕು ಸಾವಿರ ಸ್ಕೂಲ್ ಬಸ್‍ಗಳು ಕೂಡ 15 ವರ್ಷ ಹಳೆಯದಾಗಿದ್ದು, ಇಂದಿಗೂ ಓಡಾಡುತ್ತಿದೆ. ಇದರಿಂದ ಪೋಷಕರು ಕೂಡ ಮಕ್ಕಳನ್ನು ಸ್ಕೂಲ್ ವ್ಯಾನ್‍ನಲ್ಲಿ ಕಳುಹಿಸಲು ಭಯಪಡುವಂತಾಗಿದೆ. ಇದನ್ನೂ ಓದಿ: ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

ಕೇವಲ ಬಸ್ ಮಾತ್ರವಲ್ಲದೇ ರಾಜ್ಯದಲ್ಲಿ ಒಂದು ಕೋಟಿ ವಾಹನದಲ್ಲಿ ಬರೋಬ್ಬರಿ 45 ಲಕ್ಷ ವಾಹನಗಳು ಔಟ್ ಡೇಟೆಡ್ ಆಗಿದೆ. ಇದರಿಂದ ಮಾಲಿನ್ಯ ಹಾಗೂ ಆಕ್ಸಿಡೆಂಟ್ ಪ್ರಕರಣವೂ ಹೆಚ್ಚಳವಾಗಲಿದೆ. ಬಸ್ ಮಾಲೀಕರ ದುರಾಸೆಗೆ ಜನರ ಜೀವ ಬಲಿಯಾಗುತ್ತಿದೆ.

ಬಸ್ ನಿರ್ವಹಣೆ ಸರಿಯಿಲ್ಲದೇ ಇದರೆ, ಹಳೆಯ ಬಸ್‍ಗಳನ್ನು ರೋಡಿಗಿಳಿಸಿದ್ರೆ ಸಾರಿಗೆ ಇಲಾಖೆ ಈಗಾಗಲೇ ಬಸ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆದರೆ ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡುವಾಗ ಸಾರಿಗೆ ಇಲಾಖೆ ಕ್ರಮ ಕೈಗೊಂಡರೆ ಈ ರೀತಿಯ ದುರಂತಗಳು ನಡೆಯುತ್ತಾನೆ ಇರಲಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *