ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ತಮ್ಮ ವೇಗದ ಎಸೆತಗಳ ಮೂಲಕ ಎದುರಾಳಿ ತಂಡದ ಆಟಗಾರರಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ 2022ರ ಐಪಿಎಲ್‍ನಲ್ಲಿ ವೇಗದ ಎಸೆತ ಎಸೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಗಂಟೆಗೆ 155.60 ಮತ್ತು 154.80 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಸದ್ದು ಮಾಡಿದ್ದರು. ಇದನ್ನೂ ಓದಿ: ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್
15ನೇ ಆವೃತ್ತಿ ಐಪಿಎಲ್‍ನಲ್ಲಿ ಉಮ್ರಾನ್ ಮಲಿಕ್ 10 ಪಂದ್ಯಗಳಿಂದ 15 ವಿಕೆಟ್ ಕಿತ್ತು ಉದಯೋನ್ಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 25 ರನ್ ನೀಡಿ 5 ವಿಕೆಟ್ ಕಿತ್ತಿರುವುದು ಮಲಿಕ್ ಬೆಸ್ಟ್ ಬೌಲಿಂಗ್ ಆಗಿದೆ. ಈ ಮೂಲಕ 15ನೇ ಆವೃತ್ತಿ ಐಪಿಎಲ್‍ನಲ್ಲಿ ಟೀಂ ಇಂಡಿಯಾಗೆ ವೇಗದ ಬೌಲರ್ ಒಬ್ಬನ ಪರಿಚಯವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್
ಐಪಿಎಲ್‍ನ ಇತಿಹಾಸವನ್ನು ಗಮನಿಸಿದಾಗ ರಾಜಸ್ಥಾನ ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಶಾನ್ ಟೈಟ್ ಗಂಟೆಗೆ 157.71 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದು, ಆ ಬಳಿಕ ಇದೀಗ ಮಲಿಕ್ ಗಂಟೆಗೆ 157 ಕಿ.ಮೀ. ವೇಗದಲ್ಲಿ ಮಿಂಚಿನ ಬೌಲಿಂಗ್ ಮಾಡಿ ಗಮನಸೆಳೆದಿದ್ದಾರೆ. ಇವರಿಬ್ಬರ ಬಳಿಕ ಆನ್ರಿಚ್ ನಾರ್ಟ್ಜೆ ಗಂಟೆಗೆ 156.22 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ತಮ್ಮ ಉರಿ ಚೆಂಡಿನ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಕ್ಕಾಬಿಕ್ಕಿಯಾಗಿಸಿದ್ದರು.