ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

Public TV
1 Min Read
manya naidu

ಸ್ಯಾಂಡಲ್‌ವುಡ್ ನಟಿ ಮಾನ್ಯಾ ನಾಯ್ಡು (Manya Naidu) ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಹಾಲಿಡೇ ಕಳೆಯಲು ಮಗಳ ಜೊತೆ ಭಾರತಕ್ಕೆ ಮರಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: 1 ಕೋಟಿ ದೇಣಿಗೆ ನೀಡಿದ ಚಿರಂಜೀವಿ, ರಾಮ್ ಚರಣ್

manya

ಕನ್ನಡದ ಶಾಸ್ತ್ರಿ, ಶಂಭು ಸಿನಿಮಾದಲ್ಲಿ ನಟಿಸಿ ಗೆದ್ದಿದ್ದ ಮಾನ್ಯಾ ಮದುವೆಯ ಬಳಿಕ ವಿದೇಶದಲ್ಲಿ ಸೆಟಲ್ ಆದರು. ಈಗ ಒಂದಷ್ಟು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಮಾನ್ಯಾ, ಸಿನಿಮಾರಂಗದ ತನ್ನ ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಉಪೇಂದ್ರ ದಂಪತಿ (Upendra) ಮನೆಗೆ ಮಗಳೊಂದಿಗೆ ಮಾನ್ಯಾ ಭೇಟಿ ನೀಡಿ ಸಮಯ ಕಳೆದಿದ್ದಾರೆ.

FotoJet 11

ಇನ್ನೂ ಶ್ರೀಮುರಳಿ (Srimurali) ಕುಟುಂಬದ ಜೊತೆ ಕೂಡ ಮಾನ್ಯಾ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಮಾನ್ಯಾ ಕಳೆದಿದ್ದಾರೆ. ಶ್ರೀಮುರಳಿ ಫ್ಯಾಮಿಲಿ ಭೋಜನ ಸವಿದಿದ್ದಾರೆ. ಇದನ್ನೂ ಓದಿ:ಬನಶಂಕರಿ ದೇವಿ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

manya 1

ಇನ್ನೂ ಅನುಪ್ರಭಾಕರ್ (Anuprabhakar) ಮನೆಗೂ ನಟಿ ಭೇಟಿ ನೀಡಿ, ವರ್ಷ ಸಿನಿಮಾ ಚಿತ್ರೀಕರಣದ ಸಂದರ್ಭವನ್ನು ಸ್ಮರಿಸಿದ್ದಾರೆ. ಅನುಪ್ರಭಾಕರ್ ಜೊತೆ ಮೊದಲು ಭೇಟಿಯಾಗಿದ್ದೆ ವರ್ಷ (Varsha) ಸಿನಿಮಾದ ಸೆಟ್‌ನಲ್ಲಿ ಎಂದು ಹೇಳುತ್ತಾ, ಅವರ ಮನೆಯಲ್ಲಿ ಕಳೆದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಮಾನ್ಯಾ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ ಅವರ ಮಾತೃ ಭಾಷೆ ತೆಲುಗು. ಅನೇಕ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಅವರು 2005ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ಕನ್ನಡ ಮಾತಾಡೋದನ್ನು ಕಲಿತಿದ್ದರು. ಈಗ ಅವರು ಮಗಳಿಗೂ ಕೂಡ ಕನ್ನಡ ಹೇಳಿಕೊಡುತ್ತಿದ್ದಾರೆ.

Share This Article