ರಾಯಚೂರು: ಮುಜರಾಯಿ ಇಲಾಖೆಯ 35 ಸಾವಿರ ದೇವಾಲಯಗಳಲ್ಲಿ 207 ಎ ಗ್ರೇಡ್ ದೇವಾಲಯಗಳಿಗೆ ದೈವಸಂಕಲ್ಪ ಹೆಸರಲ್ಲಿ ವಸತಿ ವ್ಯವಸ್ಥೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದೇವೆ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಮಂತ್ರಾಲಯದಲ್ಲಿ ಕರ್ನಾಟಕ ಯಾತ್ರಿ ಭವನ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಬಿ ಗ್ರೇಡ್, ಸಿ ಗ್ರೇಡ್ ದೇವಾಲಯಗಳ ಅಭಿವೃದ್ಧಿಗೂ ಯೋಜನೆ ರೂಪಿಸುತ್ತಿದ್ದೇವೆ ಎಂದರು.
Advertisement
Advertisement
ಮಂತ್ರಾಲಯದಲ್ಲಿನ ಕರ್ನಾಟಕ ಯಾತ್ರಿ ಭವನ 2012ರಲ್ಲಿ 4 ಕೋಟಿ ರೂ. ಅನುದಾನದಲ್ಲಿ ಆರಂಭವಾಗಿತ್ತು. ನಾನಾ ಕಾರಣಗಳಿಂದ ತಡವಾಗಿ ಉದ್ಘಾಟನೆಯಾಗಿದೆ. ಕೋವಿಡ್ ಕಾರಣಕ್ಕೆ 2 ವರ್ಷಗಳಿಂದ ಉದ್ಘಾಟನೆಯಾಗಿರಲಿಲ್ಲ. ರಾಯರ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಉದ್ಘಾಟಿಸಲಾಗಿದೆ ಎಂದು ಹೇಳಿದರು.
Advertisement
ಯಾತ್ರಿ ಭವನದಲ್ಲಿ ಇನ್ನೂ ವ್ಯವಸ್ಥೆಗಳು ಬಾಕಿ ಇದ್ದು, ಪುನಃ 4 ಕೋಟಿ ರೂ. ಬಿಡುಗಡೆ ಮಾಡುತ್ತೇವೆ. 50 ಕೋಣೆಗಳ ಕಟ್ಟಡವನ್ನು ಈಗ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ ಎಂದರು. ತಿರುಮಲ, ಪಂಡರಾಪುರ, ಶ್ರೀಶೈಲ, ರಾಮಲಲ್ಲಾದಲ್ಲೂ ಕರ್ನಾಟಕ ಭವನಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
Advertisement
ಕಾಂಗ್ರೆಸ್ ಅಮೃತಮಹೋತ್ಸವ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಬಿಜೆಪಿಗೆ ಯಾವ ಉತ್ಸವದ ಅವಶ್ಯಕತೆಯಿಲ್ಲ. ನಮ್ಮ ಸರ್ಕಾರದ ಅಭಿವೃದ್ಧಿಯನ್ನ ಜನ ನೋಡಿದ್ದಾರೆ. ಜನರಿಗೆ ನಮ್ಮ ಸಾಧನೆ ಬಗ್ಗೆ ಗೊತ್ತಿದೆ ಎಂದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಮಾವನಿಗೆ ಚಪ್ಪಲಿಯಿಂದ ಹೊಡೆದ ಸೊಸೆ
ಈದ್ಗಾ ಮೈದಾನದ ವಿಚಾರದ ಬಗ್ಗೆ ಈಗ ಸದ್ಯ ಮಾತನಾಡುವುದಿಲ್ಲ. ಜಮೀರ್ ಅವರಿಗೆ ಏನ್ ಬೇಕೋ ಅದನ್ನು ಹೇಳಿದ್ದಾರೆ ನಾವು ನ್ಯಾಯಾಲಯದ ತೀರ್ಪು ಪಾಲಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹುಟ್ಟುಹಬ್ಬದಂದೇ ಡೆತ್‍ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ