ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರುವ ತಮಿಳುನಾಡಿ ಶಶಿಕಲಾ ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು, ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ಕನ್ನಡ ಕಲಿಯಬೇಕೇಂಬ ಆಸೆಯನ್ನು ಹೊಂದಿದ್ದು, ಜೈಲಿನಿಂದಲೇ ಕನ್ನಡ ಸರ್ಟಿಫಿಕೇಟ್ ಕೋರ್ಸ್ ಮಾಡಲು ಆಸಕ್ತಿ ತೋರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಈಗಾಗಲೇ ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ದೂರು ಶಿಕ್ಷಣ ನಿರ್ದೇಶನಾಲಯಕ್ಕೆ ಜೈಲಾಧಿಕಾರಿಗಳು ಮಾಹಿತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಶಶಿಕಲಾ ಸೇರಿದಂತೆ ಪರಪ್ಪನ ಅಗ್ರಹಾರದ 200 ಕ್ಕೂ ಹೆಚ್ಚು ಖೈದಿಗಳು ಕನ್ನಡ ಸರ್ಟಿಫಿಕೇಟ್ ಕೋರ್ಸ್ ಪಡೆಯುವುದಕ್ಕೆ ಆಸಕ್ತಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಇದೇ ಶನಿವಾರದಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ತೆರಳಿ ಶಶಿಕಲಾ ಸೇರಿದಂತೆ ಇತರೆ ಖೈದಿಗಳಿಂದ ಅರ್ಜಿಯನ್ನು ಭರ್ತಿ ಮಾಡಿಸಿಕೊಂಡು ಸಹಿ ಪಡೆದುಕೊಳ್ಳಲಿದ್ದಾರೆ. ದೂರ ಶಿಕ್ಷಣ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ನೋಂದಣಿ ಮಾಡಲು ಜೈಲಿನಲ್ಲಿರುವ ಖೈದಿಗಳನ್ನು ಉತ್ತೇಜಿಸಲು ನಿರ್ದೇಶನಾಲಯದ ಅಧಿಕಾರಿಗಳು ಜೈಲಿಗೆ ತೆರಳಿದ್ದಾಗ ಈ ವಿಷಯ ತಿಳಿದು ಶಶಿಕಲಾ ಕೂಡ ಕೋರ್ಸ್ ಮಾಡಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ದೂರಶಿಕ್ಷಣ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ, ಶಶಿಕಲಾರವರು ಜೈಲು ಸೇರಿದಾಗ ಕನ್ನಡ ಗೊತ್ತಿರಲಿಲ್ಲ. ಈಗ ಸ್ವಲ್ಪ ಸ್ವಲ್ಪ ಕನ್ನಡ ಪದವನ್ನು ಬಳಸುತ್ತಿದ್ದಾರೆ. ಕನ್ನಡ ಕಲಿಯಲು ಆಸಕ್ತಿ ತೋರಿಸಿರುವುದರಿಂದ ಶಶಿಕಲಾ ಸೇರಿದಂತೆ 200ಕ್ಕೂ ಹೆಚ್ಚು ಖೈದಿಗಳಿಗೆ ಜೈಲಿನಲ್ಲೇ ಕನ್ನಡ ಶಿಕ್ಷಣ ಪಾಠ ಮಾಡಲಾಗುತ್ತದೆ. ಅಲ್ಲದೇ ಇದೇ ಶನಿವಾರ ಶಶಿಕಲಾರ ಅರ್ಜಿಯನ್ನು ಸಹ ಭರ್ತಿಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv