ಕೊಪ್ಪಳ: ಮಸೀದಿ, ಮಂದಿರಗಳಲ್ಲಿ ಧ್ವನಿ ವರ್ಧಕ ಬಳಕೆ ವಿಚಾರ, ಇದು ಇವತ್ತಿನ ವಿಷಯ ಅಲ್ಲ. ಬಹಳ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಇದೆ. ಇಷ್ಟೇ ಪ್ರಮಾಣದ ಧ್ವನಿ ವರ್ದಕ ಬಳಸಲು ಆದೇಶವಿದೆ. ಆದರೆ ಅದು ಸರಿಯಾಗಿ ಫಾಲೋ ಆಪ್ ಆಗುತ್ತಿಲ್ಲ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕೊಪ್ಪಳದಲ್ಲಿ ಬಿಜೆಪಿ 42 ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲ್ಲ ಧಾರ್ಮಿಕ ಸಂಸ್ಥೆಗಳಿಗೆ ನಿಯಮಗಳಿವೆ. ನಾವೀಗ ಆ ನಿಯಮಗಳನ್ನ ಫಾಲೋ ಅಪ್ ಮಾಡುವ ಪ್ರಯತ್ನ ಮಾಡೋ ಕೆಲಸ ಆಗುತ್ತಿದೆ. ಕೋರ್ಟ್ ಆದೇಶ ಇರೋದ್ರಿಂದ ಎಲ್ಲರೂ ಫಾಲೋ ಮಾಡಬೇಕು ಎಂದರು. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ
Advertisement
ಇಂದು ಕೊಪ್ಪಳದಲ್ಲಿ, 42 ನೇ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪಕ್ಷದ ಮಹಾನ್ ನಾಯಕರಾದ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. pic.twitter.com/SrP8PwvSNn
— Shashikala Jolle (@ShashikalaJolle) April 6, 2022
ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು. ರಾಜ್ಯದಲ್ಲಿ ಮಾವು ಮಾರಾಟದಲ್ಲಿ ಧರ್ಮ ಬಳಕೆಯಾಗುತ್ತಿರುವ ಮ್ಯಾಂಗೋ ವಾರ್ ಬಗ್ಗೆ ನೋ ಕಾಮೆಂಟ್ಸ್ ಎಂದರು.
Advertisement
ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಹೀಗಾಗಿ ನಾವು ಬಜೆಟ್‍ನಲ್ಲಿ ಹಣ ಇಟ್ಟಿದ್ದೇವೆ. ಶೀಘ್ರದಲ್ಲೇ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕೆಲಸ ಆರಂಭ ಮಾಡುತ್ತೇವೆ ಎಂದಿದ್ದಾರೆ. ನಮಗೆ ಪಕ್ಷ ಮುಖ್ಯ ಅಲ್ಲ. ನಮಗೆ ಭಾರತ ಮಾತೆ ಮುಖ್ಯ, ಭಾರತ ಮಾತೆಯನ್ನ ಉಳಿಸಿದಾಗ ಮಾತ್ರ ನಾವೆಲ್ಲ ಉಳಿಯೋಕೆ ಸಾಧ್ಯ ಎಂದು ಹೇಳಿದ್ದಾರೆ.
Advertisement
Advertisement
ಅನೇಕ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ಇಂದು ಬಿಜೆಪಿ ಈ ಮಟ್ಟಕ್ಕೆ ಬೆಳದಿದೆ. ನರೇಂದ್ರ ಮೋದಿ ದೈವ ಪುರುಷರು, ಅವರನ್ನು ಪ್ರಧಾನಿಯಾಗಿ ಪಡೆದಿದ್ದೆ ನಮ್ಮ ಭಾಗ್ಯವಾಗಿದೆ. ಮೋದಿ ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಮೋದಿ ತಮ್ಮ ಮನೆಗೆ ಕೆಲಸ ಮಾಡ್ತೀಲ್ಲ, ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಸ್ಲಿಂ ಮುಖಂಡರು ಸಹ ಪಾಲ್ಗೊಂಡಿದ್ದರು. ಮರ್ದಾನ ಸಾಬ, ಪೀರಾಹುಸೇನ ಹೊಸಹಳ್ಳಿ ಹಲವು ಮುಖಂಡರು ಭಾಗವಹಿಸಿದ್ದರು.