ನವದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಅವರ ಮಾಜಿ ಆಪ್ತ ಸಹಾಯಕ ಸೇರಿದಂತೆ ಇಬ್ಬರನ್ನು ದೆಹಲಿ ಕಸ್ಟಮ್ಸ್ ಬುಧವಾರ ಬಂಧಿಸಿದೆ.
ತರೂರ್‌ಗೆ ಮಾಜಿ ಪಿಎ ಆಗಿದ್ದ ಶಿವಕುಮಾರ್ ಪ್ರಸಾದ್ ಅವರು ದುಬೈನಿಂದ ವ್ಯಕ್ತಿಯೊಬ್ಬರನ್ನು ಬರಮಾಡಿಕೊಳ್ಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರು ಸುಮಾರು 500 ಗ್ರಾಂ ಚಿನ್ನವನ್ನು ಪ್ರಸಾದ್ ಅವರಿಗೆ ನೀಡಲು ಪ್ರಯತ್ನಿಸಿದಾಗ ಇಬ್ಬರನ್ನೂ ಬಂಧಿಸಲಾಯಿತು. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಪುರಿ ಜಗನ್ನಾಥ ಚಂದನ್ ಜಾತ್ರಾ ಉತ್ಸವದಲ್ಲಿ ಪಟಾಕಿ ಅವಘಡ – 15 ಮಂದಿಗೆ ಗಾಯ
Advertisement
Advertisement
ಪ್ರಸಾದ್ ಅವರು ಏರೋಡ್ರೋಮ್ ಎಂಟ್ರಿ ಪರ್ಮಿಟ್ ಕಾರ್ಡ್ ಅನ್ನು ಹೊಂದಿದ್ದು, ಅದು ಅವರಿಗೆ ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಅವರು ವಿಮಾನ ನಿಲ್ದಾಣದ ಆವರಣವನ್ನು ಪ್ರವೇಶಿಸಿದ್ದರು.
Advertisement
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಶಿ ತರೂರ್ ಅವರ ಸಹಾಯಕನ ಬಂಧನಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಟೀಕಾಪ್ರಹಾರ ನಡೆಸಿವೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಬೆದರಿಕೆ: ಅಪ್ರಾಪ್ತ ವಶಕ್ಕೆ
Advertisement
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆಪ್ತ ಸಹಾಯಕ ಬಂಧನಕ್ಕೊಳಗಾದ ಒಂದು ದಿನದ ನಂತರ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದರು. ಪ್ರಕರಣದಲ್ಲಿ ಕನೂನು ತನ್ನದೇ ಆದ ಕ್ರಮಕೈಗೊಳ್ಳಬೇಕು.