ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿರುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ವೆಬ್‍ಸೈಟ್ ಒಂದಕ್ಕೆ ಲೇಖನವನ್ನು ಬರೆದಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಕೋಮು ಗಲಭೆಗಳನ್ನು ಕಡಿತಗೊಳಿಸುವ ಬಗ್ಗೆ ಬಿಜೆಪಿ ಸಚಿವರುಗಳು ಏಕೆ ಸುಮ್ಮನಿದ್ದಾರೆ ಎನ್ನುವುದು ತಿಳಿಯದ ವಿಚಾರವಾಗಿದೆ. ಆದ್ದರಿಂದ ಭಾರತದಲ್ಲಿ ಹಲವು ಕಡೆ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿದ್ದರೇ ಉತ್ತಮ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ತಾಲಿಬಾನ್ ಆರಂಭಿಸಿದೆಯಾ? ಶಶಿ ತರೂರ್ ಪ್ರಶ್ನೆ
Advertisement
Advertisement
ಬಿಜೆಪಿ `ಹಿಂದೂತ್ವ ಸಿದ್ಧಾಂತ’ ವನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲವು ಸಾಧಿಸಿದರೆ, ಭಾರತವನ್ನು ಹಿಂದೂ ಪಾಕಿಸ್ತಾನವಾಗಿ ಬದಲಿಸುತ್ತದೆ ಎಂದು ಶಶಿ ತರೂರ್ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದೂ-ಪಾಕಿಸ್ತಾನ ಆಗಲಿದೆ: ಶಶಿ ತರೂರ್
Advertisement
ತಿರುವನಂತಪುರಂ ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ್ದ ಅವರು, ಬಿಜೆಪಿ ಹೊಸ ಸಂವಿಧಾನವನ್ನು ರಚಿಸಿ, ಅಲ್ಪಸಂಖ್ಯಾತರಿಗೆ ಹಕ್ಕು ನೀಡದ ಪಾಕಿಸ್ತಾನದ ರೀತಿ ಭಾರತವನ್ನು ಮಾರ್ಪಾಡಿಸಿ ಹಿಂದೂ ರಾಷ್ಟ್ರದ ಹಾದಿಯನ್ನು ಸುಗಮಗೊಳೀಸಲಿದೆ. ಬಿಜೆಪಿಯು ಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರೆ, ನಮ್ಮ ಪ್ರಜಾಪ್ರಭುತ್ವದ ಎಲ್ಲ ಅಂಶಗಳನ್ನು ಭಾರತದ ಸಂವಿಧಾನದಿಂದ ತೆಗೆದು ಹಾಕುತ್ತಾರೆ. ತಮಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಹೊಸ ಸಂವಿಧಾನವನ್ನು ಸೃಷ್ಟಿಸುತ್ತಾರೆ ಎಂದು ಶಶಿ ತರೂರ್ ಭವಿಷ್ಯ ನುಡಿದಿದ್ದರು.