ತಿರುವನಂತಪುರಂ: ಓಣಂ ಹಬ್ಬ ಕೇರಳ ಜನರಿಗೆ ತುಂಬಾ ವಿಶೇಷವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಹಬ್ಬದ ಶುಭ ಹಾರೈಸಿ ಒಂದು ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಮುಂಡು, ಶಲ್ಯ ಮತ್ತು ಕೆಂಪು ಬಣ್ಣದ ಕುರ್ತಾ ಧರಿಸಿ, ಉಯ್ಯಾಲೆ ಆಡುತ್ತಿರುವ ಶಶಿ ತರೂರ್, ಓಣಂ ಹಬ್ಬದಂದು ಸಾಮಾನ್ಯವಾಗಿ ಉಯ್ಯಾಲೆ ಆಟವೆಂಬುದು ಯುವತಿಯರಿಗೆ ಮೀಸಲಾಗಿದೆ. ಆದರೆ ನನಗೂ ಈ ಬಾರಿ ಉಯ್ಯಾಲೆ ಆಡುವ ಉತ್ಸಾಹ ಬಂದಿದೆ .ಎಲ್ಲರಿಗೂ ಹ್ಯಾಪಿ ಓಣಂ ಎಂದು ಬರೆದುಕೊಂಡು ಉಯ್ಯಾಲೆ ಆಡುತ್ತೀರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಆರ್ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್
Advertisement
There’s an Onam swing tradition that one normally leaves to young girls. I was persuaded to get Into the spirit of things this year. Happy Onam! pic.twitter.com/Z23nJ9Fmfp
— Shashi Tharoor (@ShashiTharoor) August 21, 2021
Advertisement
ಈ ಬಾರಿ ಶಶಿ ತರೂರ್ ಅವರು ಪಾಲಕ್ಕಾಡ್‍ನಲ್ಲಿರುವ ತಮ್ಮ ಮನೆಯಲ್ಲಿ ಪೂರ್ವಜರೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ. ಅದಕ್ಕೂ ಮೊದಲು ತಾವು ಮಲಯಾಳಂ ಚಾನೆಲ್‍ವೊಂದಕ್ಕೆ ನೀಡಿದ ಸಂದರ್ಶನದ ವೀಡಿಯೋ ತುಣುಕನ್ನೂ ಶೇರ್ ಮಾಡಿಕೊಂಡಿದ್ದಾರೆ. ಆ ಚಾನಲ್‍ಗೆ ನೀಡಿದ ಸಂದರ್ಶನದಲ್ಲಿ ಶಶಿ ತರೂರ್, ಓಣಂ ಹಬ್ಬ, ಅದರ ಇತಿಹಾಸ, ವಿಶೇಷತೆ ಬಗ್ಗೆ ತಿಳಿಸಿದ್ದಾರೆ. ತಮ್ಮ ಬಾಲ್ಯದಲ್ಲಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ. ಹಾಗೇ ತಾವು 2010ರಲ್ಲಿ ಸುನಂದಾ ಪುಷ್ಕರ್ ಅವರನ್ನು ವಿವಾಹವಾಗಿದ್ದು, ಪಾಲಕ್ಕಾಡ್‍ನ ಎಲವಾಂಚೇರಿ ಹಳ್ಳಿಯಲ್ಲಿ ಎಂದೂ ತಿಳಿಸಿದ್ದಾರೆ.
Advertisement
View this post on Instagram
Advertisement
ಓಣಂ ಹಬ್ಬವನ್ನು ಸುಗ್ಗಿ, ಸಮೃದ್ಧಿ, ಸಂತೋಷದ ಹಬ್ಬ ಎಂದೇ ಕರೆಯಲಾಗುತ್ತದೆ. ಹಾಗೇ, ಉದಾತ್ತತೆಗೆ ಹೆಸರಾಗಿದ್ದ ಮಹಾಬಲಿ ರಾಜನ ವಾರ್ಷಿಕ ಪೂಜೆಯ ಹಬ್ಬವೂ ಹೌದು. ಈ ದಿನದಂದು ಹೂವಿನ ರಂಗೋಲಿ, ಪುಲಿಕಳಿ, ಕಥಕ್ಕಳಿ, ಉಯ್ಯಾಲೆಯಾಟದಂಥ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. 10 ದಿನಗಳ ಹಬ್ಬವಾಗಿರುವ ಓಣಂ ಈ ಬಾರಿ ಆಗಸ್ಟ್ 23ಕ್ಕೆ ಮುಕ್ತಾಯವಾಗಲಿದೆ.