ತಿರುವನಂತಪುರಂ: ಕಾಂಗ್ರೆಸ್ ಸಂಸದ ಶಶಿ ತರೂರ್ ಲಾರಿಯೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಕೇಂದ್ರ ಸರ್ಕಾರ ನಿದ್ರಿಸುತ್ತಿದೆ ಎಂದು ಛೇಡಿಸಿದ್ದಾರೆ. ಲಾರಿಯೊಂದರ ಹಿಂಬರಹದಲ್ಲಿ ದಯವಿಟ್ಟು ಹಾರ್ನ್ ಮಾಡಬೇಡಿ, ಮೋದಿ ಸರ್ಕಾರ ನಿದ್ರಿಸುತ್ತಿದೆ ಎಂದು ಬರೆದಿದ್ದು, ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ. ಆದರೆ ಇದು ನಿಜವಾದ ಚಿತ್ರವಲ್ಲ, ಫೋಟೋಶಾಪ್ ಮಾಡಿರುವ ಚಿತ್ರವೆಂದು ಅನೇಕರು ಕಮೆಂಟ್ ಮಾಡಿದ್ದಾರೆ. ಫ್ಯಾಕ್ಟ್ ಚೆಕ್ ವರದಿಗಳು ಇದನ್ನೇ ಹೇಳಿವೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
Advertisement
— Shashi Tharoor (@ShashiTharoor) November 6, 2021
Advertisement
ಈ ಹಿಂದೆ ಇದೇ ಚಿತ್ರದ ಮೂಲಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಛೇಡಿಸಲಾಗಿತ್ತು. ಡೀಸೆಲ್‍ನಿಂದ ಚಲಿಸುತ್ತೇನೆ, ಸರಿಯಾಗಿ ಶುಲ್ಕವನ್ನು ಪಾವತಿಸುತ್ತೇನೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಂತೆ ದಳ್ಳಾಳಿತನದಿಂದ ಜನರ ದುಡ್ಡಿನಲ್ಲಿ ಮಜಾ ಮಾಡುವುದಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿತ್ತು. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ