ಹೈದರಾಬಾದ್: ಶಶಿ ತರೂರ್ ಅವರನ್ನು ಕತ್ತೆ ಎಂದು ಕರೆದು ವಿವಾದಕ್ಕೀಡಾದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಕ್ಷಮೆ ಕೇಳಿದ್ದಾರೆ.
ನಾನು ಈ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಮತ್ತು ನನ್ನ ಹಿರಿಯ ಸಹೋದ್ಯೋಗಿಯನ್ನು ಅತ್ಯುನ್ನತ ಗೌರವದಲ್ಲಿರಿಸುವೆ ಎಂದು ಪುನರುಚ್ಚರಿಸುತ್ತೇನೆ ಎಂದು ತಿಳಿಸಲು ಶಶಿ ತರೂರ್ ಅವರೊಂದಿಗೆ ಮಾತನಾಡಿದ್ದೇನೆ . ನನ್ನ ಮಾತುಗಳಿಂದ ಅವರಿಗೆ ಉಂಟಾದ ನೋವಿಗೆ ನಾನು ವಿಷಾದಿಸುತ್ತೇನೆ. ನಾವು ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ನೀತಿಗಳಲ್ಲಿ ನಮ್ಮ ನಂಬಿಕೆಯನ್ನು ಇರಿಸಿದ್ದೇವೆ ಎಂದು ರೆಡ್ಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ
Advertisement
I received a gracious call from @revanth_anumula to apologise for what was said. I accept his expression of regret & am happy to put this unfortunate episode behind us. We must work together to strengthen @INCIndia in Telengana & across the country. https://t.co/pwIRmxpipn
— Shashi Tharoor (@ShashiTharoor) September 16, 2021
Advertisement
ರೆಡ್ಡಿಯವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ತರೂರ್, ಪಕ್ಷದ ನಾಯಕನಿಂದ ಕರೆಯನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು. ನಾನು ಅವರ ವಿಷಾದದ ಅಭಿವ್ಯಕ್ತಿಯನ್ನು ಸ್ವೀಕರಿಸುತ್ತೇನೆ ಮತ್ತು ಈ ದುರದೃಷ್ಟಕರ ಪ್ರಸಂಗವನ್ನು ಹಿಂದೆ ಸರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ ಬರ್ಗರ್ನಲ್ಲಿ ಸಿಕ್ತು ಕೈ ಬೆರಳು
Advertisement
ರೆಡ್ಡಿ ತರೂರ್ ಅವರನ್ನು ಕತ್ತೆ ಎಂದು ಕರೆದರು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೇಳಿದ್ದರು. ರೆಡ್ಡಿ ಅವರ ಈ ಹೇಳಿಕೆ ವಿವಾದವನ್ನುಂಟುಮಾಡಿದ್ದು, ಹಿರಿಯ ನಾಯಕನ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರು ಕ್ಷಮೆ ಕೇಳಿರುವುದು ಸುದ್ದಿಯಾಗಿದೆ.