ನವದೆಹಲಿ: ಸಂಸದ ಶಶಿ ತರೂರ್ ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಮಂತ್ರಿ ಎಲ್‌ಕೆ ಅಡ್ವಾನಿ ಅವರನ್ನು ತರೂರ್ ಮುಕ್ತ ಕಂಠದಿಂದ ಹೊಗಳಿದ್ದಾರೆ.
ಮಾಜಿ ಉಪಪ್ರಧಾನಿ ಅಡ್ವಾಣಿ ಅವರ ರಾಜಕೀಯ ಪರಂಪರೆಯನ್ನು ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ. ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರಂತೆ, ಬಿಜೆಪಿಯ ಹಿರಿಯ ನಾಯಕನ ದಶಕಗಳ ಸಾರ್ವಜನಿಕ ಸೇವೆಯನ್ನು ಒಂದೇ ಒಂದು ಘಟನೆಯ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಪ್ರತಿಪಾದಿಸಿದ್ದಾರೆ.
Wishing the venerable Shri L.K. Advani a very happy 98th birthday! His unwavering commitment to public service, his modesty & decency, and his role in shaping the trajectory of modern India are indelible. A true statesman whose life of service has been exemplary. 🙏 pic.twitter.com/5EJh4zvmVC
— Shashi Tharoor (@ShashiTharoor) November 8, 2025
ನೆಹರೂ ಅವರ ವೃತ್ತಿಜೀವನವನ್ನು ಚೀನಾ ಜೊತೆಗಿನ ಯುದ್ಧದಿಂದ ಭಾರತಕ್ಕಾದ ಹಿನ್ನಡೆಯಿಂದ ಮಾತ್ರ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿಯವರ ವೃತ್ತಿಜೀವನವನ್ನು ತುರ್ತು ಪರಿಸ್ಥಿತಿಯಿಂದ ಮಾತ್ರ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅಂತೆಯೇ ಅಡ್ವಾಣಿ ಅವರ ದೀರ್ಘ ಕಾಲದ ಸೇವೆಯನ್ನು ಒಂದೇ ಒಂದು ವಿವಾದಾತ್ಮಕ ಘಟನೆಯಲ್ಲಿಟ್ಟು ನೋಡಲಾಗದು ಎಂದು ಶಶಿ ತರೂರ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಡ್ವಾಣಿ ಅವರ 98 ನೇ ಹುಟ್ಟುಹಬ್ಬದಂದು ಅವರಿಗೆ ಶಶಿ ತರೂರ್ ಶುಭ ಹಾರೈಸಿದ್ದಾರೆ. ಅಡ್ವಾಣಿ ಅವರ ಸಾರ್ವಜನಿಕ ಸೇವೆಯಲ್ಲಿನ ಅಚಲವಾದ ಬದ್ಧತೆಯನ್ನು ಕಾಂಗ್ರೆಸ್ ಸಂಸದ ಶ್ಲಾಘಿಸಿದ್ದಾರೆ. ಅಡ್ವಾಣಿ ಹೊಗಳಿದ್ದಕ್ಕೆ ಕಾಂಗ್ರೆಸ್ಸಿಗರಿಂದ ಟೀಕೆ ವ್ಯಕ್ತವಾಗಿದೆ.

