ಕ್ಯಾಂಡಲ್ ಲೈಟ್ ಡಿನ್ನರ್​ನಲ್ಲಿ ಶಶಿಯಿಂದ ಕವಿತಾಗೆ ಲವ್ ಪ್ರಪೋಸ್

Public TV
2 Min Read
bigg boss

ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿ ಮುಗಿಯಲು ಇನ್ನೂ ಎರಡು ವಾರಗಳು ಬಾಕಿ ಇದೆ. ಆದರೆ ಈ ವೇಳೆ ಸ್ಪರ್ಧಿ ಕವಿತಾ ಅವರಿಗೆ ರೈತ ಶಶಿಕುಮಾರ್ ಪ್ರಪೋಸ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಈ ವಾರದಲ್ಲಿ ಅತಿಥಿಗಳಾಗಿ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ಮತ್ತು ಸಮೀರ್ ಆಚಾರ್ಯ ಅವರು ಆಗಮಿಸಿದ್ದಾರೆ. ಈ ಹಳೆಯ ಸ್ಪರ್ಧಿಗಳನ್ನು ವಿಶೇಷವಾದ ಕೋಣೆಯಲ್ಲಿರಿಸಿದ್ದು, ಟಿವಿ ಮೂಲಕ ಒಬ್ಬರೊಬ್ಬರನ್ನು ಮಾತಾಡುವ ವ್ಯವಸ್ಥೆ ಮಾಡಲಾಗಿತ್ತು. ಮನೆಗೆ ಆಗಮಿಸಿರುವ ಅತಿಥಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ.

22 1

ಪಪ್ರೋಸ್ ಮಾಡಿದ್ರು:
ಕವಿತಾ ಮತ್ತು ಶಶಿ ಕ್ಯಾಂಡಲ್ ಲೈಡ್ ಡಿನ್ನರ್ ನಲ್ಲಿದ್ದರು. ಈ ವೇಳೆ ಅತಿಥಿ ಪ್ರಥಮ್ ನಿರಂತರವಾಗಿ ಏನು ಮಾಡಬೇಕು ಎಂಬುದನ್ನು ಕವಿತಾ ಅವರಿಗೆ ಸೂಚನೆ ನೀಡುತ್ತಿದ್ದರು. ಯಾರಿಗೂ ತಿಳಿಯದಂತೆ ಕವಿತಾ ಬಿಗ್‍ಬಾಸ್ ನೀಡಿರುವ ರಹಸ್ಯ ಇಯರ್‍ಫೋನ್ ಧರಿಸಿ ಅದನ್ನು ತಮ್ಮ ಕೂದಲುಗಳಿಂದ ಮರೆಮಾಡಿಕೊಂಡಿದ್ದರು. ಈ ಟಾಸ್ಕ್ ಬಗ್ಗೆ ಶಶಿ ಸೇರಿದಂತೆ ಉಳಿದ ಯಾರಿಗೂ ತಿಳಿದಿರಲಿಲ್ಲ.

ಡಿನ್ನರ್ ಪಾರ್ಟಿ ಶುರುವಾದ ನಂತರ ಪ್ರಥಮ್ ಹೇಳಿದ ರೀತಿಯೇ ಕವಿತಾ ಮಾತನಾಡತೊಡಗಿದರು. ಮೊದಲಿಗೆ ಚಮಚವನ್ನು ಕೆಳಗೆ ಬೀಳಿಸಿ ಅದನ್ನು ಶಶಿ ಎತ್ತಿಕೊಡುವಾಗ ನಿಮ್ಮಿಬ್ಬರ ಗ್ಲಾಸ್ ಬದಲಾಯಿಸಬೇಕು ಎಂದು ಹೇಳಿದ್ದರು. ಅದೇ ರೀತಿ ಕವಿತಾ ಶಶಿ ಚಮಚ ತೆಗೆದುಕೊಡುವಾಗ ಗ್ಲಾಸ್ ಬದಲಾಯಿಸುತ್ತಾರೆ. ಹೀಗೆ ಕೆಲವು ಸಮಯದವರೆಗೂ ಪ್ರಥಮ್ ಹೇಳಿದ ರೀತಿಯೇ ಕವಿತಾ ಟಾಸ್ಕ್ ಮಾಡಿದ್ದಾರೆ.

55 1

ಪ್ರಥಮ್ ಎದ್ದು ನಿಂತು ಲವ್ ಪ್ರಪೋಸ್ ಮಾಡುವಂತೆ ಕೇಳು ಎಂದು ಕವಿತಾಗೆ ಹೇಳುತ್ತಾರೆ. ಕವಿತಾ ಕೂಡ ಶಶಿಗೆ ಐ ಲವ್ ಯು ಹೇಳುವಂತೆ ಹೇಳುತ್ತಾರೆ. ಆಗ ಶಶಿ ಎದ್ದು ನಿಂತು ಕಣ್ಣು ಮುಚ್ಚಿಕೊಂಡು ಕವಿತಾಗೆ ‘ಐ ಲವ್ ಯು’ ಎಂದು ಪ್ರಪೋಸ್ ಮಾಡುತ್ತಾರೆ. ಹೀಗೆ ಕವಿತಾ ಕೇಳುವ ಎಲ್ಲ ಪ್ರಶ್ನೆಗಳಿಗೂ ಶಶಿ ಉತ್ತರಿಸುತ್ತಾ ಹೋಗಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಶಶಿ ಮತ್ತು ಕವಿತಾ ಡಿನ್ನರ್ ನಲ್ಲಿ ತೊಡಗಿದ್ದರೆ, ಆ್ಯಂಡಿ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ್ಯಂಡಿ ಮಾತ್ರ ಬಾಗಿಲ ಬಳಿ ಬೆಡ್ ಶೀಟ್ ಹೊದ್ದುಕೊಂಡು ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಮನೆಗೆ ಆಗಮಿಸಿದ್ದ ವಿಶೇಷ ಅತಿಥಿಗಳು ಈ ವಾರ ಧನರಾಜ್ ಅವರನ್ನು ಸೇವ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *