– ಪಾಕ್ ಹೊರಗಿಟ್ಟು ಪಂದ್ಯ ನಡೆಸಿ ಎಂದಿದ್ದ ಬಿಸಿಸಿಐ
– ಭಾರತದ ಮನವಿಯನ್ನು ತಿರಸ್ಕರಿಸಿದ ಐಸಿಸಿ
– ಭಾರತ ಸರ್ಕಾರದ ಅಂಗಳಕ್ಕೆ ಚೆಂಡೆಸೆದ ಬಿಸಿಸಿಐ
ದುಬೈ: ಭಯೋತ್ಪಾದನೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿನ ಕ್ರಿಕೆಟ್ ಒಪ್ಪಂದಗಳನ್ನು ಕೈಬಿಡುವಂತೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಸಾವನ್ನಪ್ಪಿದ ಬಳಿಕ ಬಿಸಿಸಿಐ ಪತ್ರ ಬರೆದಿತ್ತು. ಅಲ್ಲದೇ ಭಯೋತ್ಪಾದನೆಗೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿನ ಒಪ್ಪಂದಗಳನ್ನು ಮುರಿದುಕೊಳ್ಳಬೇಕು ಎಂದು ಐಸಿಸಿಗೆ ಮನವಿ ಮಾಡಿತ್ತು. ಈ ಮನವಿ ಪ್ರತಿಕ್ರಿಯೆ ನೀಡಿರುವ ಐಸಿಸಿ, ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ವೇದಿಕೆ ಇದಲ್ಲ ಎಂದು ಐಸಿಸಿ ಪ್ರತಿಕ್ರಿಯೆ ನೀಡಿದೆ ಎನ್ನಲಾಗಿದೆ.
Advertisement
Advertisement
ಐಸಿಸಿ ಶನಿವಾರ ನಡೆಸಿದ ಸಭೆಯಲ್ಲಿ ಈ ಕುರಿತು ಅಧ್ಯಕ್ಷರಾದ ಶಶಾಂಕ್ ಮನೋಹರ್ ಈ ವಿಚಾರವಾಗಿ ಚರ್ಚೆ ನಡೆಸಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದ್ದು, ಇಂತಹ ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಿಸಿಸಿಐ ಅಧಿಕಾರಿ ರಾಹುಲ್ ಜೋಹ್ರಿ ಅವರು ಐಸಿಸಿಗೆ ಪತ್ರ ಬರೆದಿದ್ದರು. ಈ ವಿಚಾರವನ್ನು ಮನೋಹರ್ ಅವರೇ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು, ಆದರೆ ಐಸಿಸಿಗೆ ಕ್ರಿಕೆಟ್ ರಕ್ಷಣೆ ಮಾಡುವುದು ಪ್ರಾಥಮಿಕ ಕರ್ತವ್ಯವಾಗಿದೆ ಎಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
ಫೆ.22 ರಂದು ಜೋಹ್ರಿ ಅವರು, ಐಸಿಸಿ ಅಧ್ಯಕ್ಷ ಮನೋಹರ್ ಅವರ ಮೂಲಕ ಐಸಿಸಿ ಸಿಎಒಗೆ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಬಿಸಿಸಿಐ ಆಡಳಿತ ಮಂಡಳಿ ಮೂವರು ಸದಸ್ಯರೊಂದಿಗೆ ಪ್ರಸ್ತಾಪ ಮಾಡಿದ್ದಾಗಿ ತಿಳಿಸಿದರು. ಪತ್ರ ಕಳುಹಿಸುವ ಮುನ್ನವೇ ಬಿಸಿಸಿಐ ಆಡಳಿತ ಸಮಿತಿ ಅಧ್ಯಕ್ಷ ವಿನೋದ್ ರಾಯ್ ಅವರು ಪಾಕಿಸ್ತಾನವನ್ನು ವಿಶ್ವಕಪ್‍ನಿಂದ ನಿಷೇಧ ಮಾಡಬೇಕೆಂಬ ಮನವಿಯ ಬಗ್ಗೆಯೂ ಪರಿಶೀಲನೆ ನಡೆಸಿದ್ದರು.
Advertisement
ಭಾರತದ ಪತ್ರಕ್ಕೆ ಐಸಿಸಿ ಸಭೆಯ ವೇಳೆ ಪಾಕಿಸ್ತಾನ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎನ್ನಲಾಗಿದೆ. ಆದರೆ ಭಯೋತ್ಪಾದಗೆ ಬೆಂಬಲ ರಾಷ್ಟ್ರಗಳನ್ನು ನಿಷೇಧ ಮಾಡುವ ಪ್ರಸ್ತಾಪ ತಿಸ್ಕರಿಸಿದ್ದರು ಕೂಡ, ವಿಶ್ವಕಪ್ ಪಂದ್ಯಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು. ಭಾರತ ಪಂದ್ಯಗಳಿಗೆ ಮತ್ತಷ್ಟು ಭದ್ರತೆ ಒದಗಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‍ಗೆ ಮನವಿ ಮಾಡಲಾಗುವುದು ಐಸಿಸಿ ತಿಳಿಸಿದೆ ಎಂದು ವರದಿಯಾಗಿದೆ.
ಪುಲ್ವಾಮಾ ದಾಳಿಯ ಬಳಿಕ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಬಾರದು ಎಂಬ ಒತ್ತಡ ವ್ಯಕ್ತವಾದ ಪರಿಣಾಮ ಬಿಸಿಸಿಐ ಪತ್ರ ಬರೆದಿತ್ತು. ಮೇ 30 ರಿಂದ ಆರಂಭವಾಗುವ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16 ರಂದು ಭಾರತ ಪಾಕಿಸ್ತಾನವನ್ನು ಎದುರಿಸಲಿದೆ.
ಐಸಿಸಿ ತನ್ನ ಮನವಿಯನ್ನು ತಿರಸ್ಕರಿಸಿರುವ ಪರಿಣಾಮ ಸದ್ಯ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದ್ದು, ಮತ್ತೊಮ್ಮೆ ಭಾರತ ಸರ್ಕಾರ ಮಡಿಲಿಗೆ ಚೆಂಡು ಎಸೆಯುತ್ತಾ ಎಂಬ ಅನುಮಾನ ಮೂಡಿದೆ. ಇಲ್ಲದೇ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬರುತ್ತಾ ಎನ್ನುವ ಪ್ರಶ್ನೆ ಎದ್ದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv