Stardom: ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾದ ಆರ್ಯನ್‌ಗೆ ಸಾಥ್ ಕೊಟ್ಟ ಶಾರುಖ್ ಖಾನ್

Public TV
1 Min Read
shah rukha khan aryan 3

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಆರ್ಯನ್ ಬ್ಯುಸಿಯಾಗಿದ್ದಾರೆ. ಮಗನ ಚೊಚ್ಚಲ ಚಿತ್ರಕ್ಕೆ ಶಾರುಖ್ ಖಾನ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚನ ಪುತ್ರಿ ಸಾನ್ವಿ?

aryan khan 2

‘ಸ್ಟಾರ್ ಡಮ್’ (Stardom) ಎಂಬ ವೆಬ್ ಸಿರೀಸ್‌ಗೆ ಆರ್ಯನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ಈಗ ಕೊನೆಯ ಹಂತಕ್ಕೆ ತಲುಪಿದೆ. ಮುಂಬೈನ ಬಾಂದ್ರಾದಲ್ಲಿ ಲಾಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಆರ್ಯನ್ ಜೊತೆ ಶಾರುಖ್ ಖಾನ್ ಭಾಗಿಯಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ವೆಬ್‌ ಸಿರೀಸ್‌ ರಿಲೀಸ್‌ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ.

aryan khan 1‘ಸ್ಟಾರ್ ಡಮ್’ ವೆಬ್ ಸಿರೀಸ್‌ನಲ್ಲಿ ಶಾರುಖ್ (Sharukh Khan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಶಾರುಖ್‌ಗೆ ಯಾವ ಪಾತ್ರ? ಆ ಪಾತ್ರದ ಲುಕ್ ಹೇಗಿರಲಿದೆ ಎಂಬುದನ್ನು ಫ್ಯಾನ್ಸ್ ಊಹಿಸಲು ಶುರು ಮಾಡಿದ್ದಾರೆ.

ಇನ್ನೂ ಮಗಳು ಸುಹಾನಾಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಶಾರುಖ್ ಮುಂದಾಗಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ಎಂಟ್ರಿ ಅದ್ಧೂರಿಯಾಗಿರಬೇಕು ಎಂದು ಶಾರುಖ್ ತಯಾರಿ ಮಾಡಿಕೊಳ್ತಿದ್ದಾರೆ. ಆ ಚಿತ್ರಕ್ಕೆ ಕಿಂಗ್ ಎಂದು ಟೈಟಲ್ ಇಡಲಾಗಿದೆ.

Share This Article