`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

Public TV
1 Min Read
sharukh khan

ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

sharukh 1

2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

sharukh khan 1ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.

Share This Article