`ಸಜನಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಶರ್ಮಿಳಾ ಮಾಂಡ್ರೆ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಶೂಟಿಂಗ್‌ಗೆ ಬ್ರೇಕ್ ಹಾಕಿ, ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಶರ್ಮಿಳಾ ಮಾಂಡ್ರೆ ತೆರಳಿದ್ದಾರೆ.
View this post on Instagram
ಧ್ಯಾನ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬೆಡಗಿ ಶರ್ಮಿಳಾ ನಂತರ ಕನ್ನಡದ ಸಾಕಷ್ಟು ಚಿತ್ರಗಳ ಸೌತ್ ಸಿನಿಮಾ ಅಂಗಳದಲ್ಲೂ ನಟಿಸಿ ಸೈ ಎನಿಸಿಕೊಂಡರು. ಈಗ ಕೈತುಂಬಾ ಸಿನಿಮಾಗಳ ಮಧ್ಯೆ ಶೂಟಿಂಗ್‌ಗೆ ಬ್ರೇಕ್ ಹಾಕಿ ಶಿರಡಿಯತ್ತ ಶರ್ಮಿಳಾ ಬಂದಿದ್ದಾರೆ. ಸಾಯಿ ಬಾಬಾ ಸನ್ನಿಧಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್
ನಟಿ ಶರ್ಮಿಳಾ ಸದ್ಯ `ಗಾಳಿಪಟ 2′, `ದಸರಾ’ ಮತ್ತು ಅನಂತ್ ನಾಗ್ ನಟನೆಯ `ಮಂಡಲ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಕು ನಟಿ ಶರ್ಮಿಳಾ ಸಜ್ಜಾಗಿದ್ದಾರೆ.